ಭಾರತದಲ್ಲಿ ಕೋಮು ವಿಚಾರವಾಗಿ ಯುದ್ಧ ನಡೆದಿಲ್ಲ: ಮೋಹನ್ ಭಾಗವತ್
KannadaprabhaNewsNetwork | Published : Oct 23 2023, 12:16 AM IST
ಭಾರತದಲ್ಲಿ ಕೋಮು ವಿಚಾರವಾಗಿ ಯುದ್ಧ ನಡೆದಿಲ್ಲ: ಮೋಹನ್ ಭಾಗವತ್
ಸಾರಾಂಶ
ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳಲು ದೇಶಾದ್ಯಂತ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ನಡೆಸುವಂತೆ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಕೋಮು ವಿಚಾರವಾಗಿ ಯುದ್ಧ ನಡೆದಿಲ್ಲ: ಮೋಹನ್ ಭಾಗವತ್ ಭಾರತ ಸರ್ವ ಜನಾಂಗವನ್ನೂ ಗೌರವಿಸುವ ದೇಶ ಇಸ್ರೇಲ್-ಹಮಾಸ್ ಯುದ್ಧದ ಹಿನ್ನೆಲೆಯಲ್ಲಿ ಹೇಳಿಕೆ ನಾಗಪುರ: ಭಾರತದಲ್ಲಿ ಕೋಮು ವಿಚಾರವಾಗಿ ಎಂದಿಗೂ ಯುದ್ಧಗಳು ನಡೆದಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಇಲ್ಲಿನ ಶಾಲೆಯೊಂದರಲ್ಲಿ ಶಿವಾಜಿಯ 350ನೇ ಪಟ್ಟಾಭಿಷೇಕ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ‘ನಮ್ಮದು ಹಿಂದೂಗಳ ದೇಶ. ಆದರೆ ಇತರ ಧರ್ಮಗಳನ್ನು ದ್ವೇಷಿಸುವುದಿಲ್ಲ. ಭಾರತ ಮತ್ತು ಹಿಂದೂ ಧರ್ಮವು ಸರ್ವ ಜನಾಂಗ, ನಂಬಿಕೆ ಮತ್ತು ಪಂಥಗಳನ್ನೂ ಗೌರವಿಸುವ ಏಕೈಕ ದೇಶ ಮತ್ತು ಧರ್ಮವಾಗಿದೆ. ಉಳಿದೆಡೆಗಳಲ್ಲೆಲ್ಲಾ ಕಲಹಗಳು ಮಿತಿಮೀರಿವೆ. ಇಸ್ರೇಲ್-ಹಮಾಸ್ ಯುದ್ಧ ಮತ್ತು ಉಕ್ರೇನ್ ಯುದ್ಧವನ್ನು ನಾವೀಗ ನೋಡುತ್ತಿದ್ದೇವೆ. ಇಂತಹ ಕಾರಣಗಳಿಗೆ ಭಾರತದಲ್ಲಿ ಎಂದಿಗೂ ಅಂತರ್ಯುದ್ಧ ನಡೆದಿಲ್ಲ. ಶಿವಾಜಿಯ ಕಾಲದಲ್ಲಿ ಈ ಕಾರಣಕ್ಕಾಗಿ ಕಾಳಗ ನಡೆದಿದ್ದನ್ನು ನಾವು ಸ್ಮರಿಸಬಹುದಷ್ಟೆ’ ಎಂದರು.