58 ವರ್ಷಕ್ಕೆ ಮಗು ಹೆತ್ತ ಮೂಸೇವಾಲ ಪೋಷಕರು ಪಂಜಾಬ್‌ಗೆ ನೋಟಿಸ್‌

| Published : Mar 21 2024, 01:03 AM IST / Updated: Mar 21 2024, 08:51 AM IST

ಸಾರಾಂಶ

ಮೂಸೆವಾಲಾನ ತಾಯಿ ಚರಣ್‌ ಕೌರ್‌ (58) ತಮ್ಮ ಇಳಿ ವಯಸ್ಸಿನಲ್ಲಿ ಐವಿಎಫ್‌ ತಂತ್ರಜ್ಞಾನದ ಮೂಲಕ ಮಗು ಪಡೆದಿದ್ದಾರೆ

ನವದೆಹಲಿ: 2 ವರ್ಷಗಳ ಗುಂಡಿನ ದಾಳಿಗೆ ಬಲಿಯಾದ ಖ್ಯಾತ ಗಾಯಕ ಸಿಧು ಮೂಸೆವಾಲಾನ ತಾಯಿ ಚರಣ್‌ ಕೌರ್‌ (58) ತಮ್ಮ ಇಳಿ ವಯಸ್ಸಿನಲ್ಲಿ ಐವಿಎಫ್‌ ತಂತ್ರಜ್ಞಾನದ ಮೂಲಕ ಮಗು ಹೆತ್ತ ಪ್ರಕರಣವನ್ನು ಗಂಭೀರವಾಗಿ ಪರಿಣಿಸಿರುವ ಕೇಂದ್ರ ಸರ್ಕಾರ ಈ ಸಂಬಂಧ ಪಂಜಾಬ್‌ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಐವಿಎಫ್‌ ತಂತ್ರಜ್ಞಾನದ ಮೂಲಕ ಮಗು ಪಡೆಯುವ ಪೋಷಕರ ವಯಸ್ಸು 21-50ರ ಒಳಗೆ ಇರಬೇಕು ಎಂದು ನಿಯಮ ಹೇಳುತ್ತದೆ. ಆದರೆ ಸಿಧು ತಂದೆ ಬಾಲ್‌ಕೌರ್‌ಗೆ 60 ವರ್ಷ ಮತ್ತು ತಾಯಿಗೆ 58 ವರ್ಷ ವಯಸ್ಸಾಗಿದೆ. 

ಹೀಗಾಗಿ ಇದು ನಿಯಮ ಬಾಹಿರ ಎಂಬ ಕಾರಣಕ್ಕಾಗಿ ಈ ಸಂಬಂಧ ವರದಿ ಕೇಳಿ ಕೇಂದ್ರ ಸರ್ಕಾರ ನೋಟಿಸ್‌ ಜಾರಿ ಮಾಡಿದೆ. ಈ ನಡುವೆ ಮಗುವಿನ ಸಂಬಂಧ ತಮಗೆ ಪಂಜಾಬ್‌ನ ಆಪ್‌ ಸರ್ಕಾರ ಕಿರುಕುಳ ನೀಡುತ್ತಿದೆ. 

ಮಗುವಿನ ಕುರಿತ ದಾಖಲೆಗಳನ್ನು ಕೇಳುತ್ತಿದೆ. ಮಗು ಕಾನೂನುಬದ್ಧವಾಗಿ ಜನಿಸಿದೆ ಎಂಬುದರ ಕುರಿತು ಸಾಕ್ಷ್ಯ ನೀಡುವಂತೆ ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದಾರೆ ಎಂದು ಬಾಲ್‌ಕೌರ್‌ ಆರೋಪಿಸಿದ್ದಾರೆ.