ಗಂಡಸರಿರುವ ಪಾರ್ಲರ್‌ಗೆಮುಸ್ಲಿಂ ಸ್ತ್ರೀಯರ ಪ್ರವೇಶತಪ್ಪು: ಯುಪಿ ಮೌಲ್ವಿ ಹೇಳಿಕೆ

| Published : Nov 18 2023, 01:00 AM IST

ಗಂಡಸರಿರುವ ಪಾರ್ಲರ್‌ಗೆಮುಸ್ಲಿಂ ಸ್ತ್ರೀಯರ ಪ್ರವೇಶತಪ್ಪು: ಯುಪಿ ಮೌಲ್ವಿ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಸ್ಲಿಂ ಮಹಿಳೆಯರು ಪುರುಷರು ನೌಕರರಾಗಿರುವ ಬ್ಯೂಟಿ ಪಾರ್ಲರ್‌ಗೆ ತೆರಳಬಾರದು. ಅದು ನಿಷಿದ್ಧ ಎಂದು ಉತ್ತರ ಪ್ರದೇಶದ ಸಹರಾನ್‌ಪುರದ ಮೌಲ್ವಿಯೊಬ್ಬರು ಹೇಳಿದ್ದಾರೆ

ಸಹರಾನ್‌ಪುರ: ಮುಸ್ಲಿಂ ಮಹಿಳೆಯರು ಪುರುಷರು ನೌಕರರಾಗಿರುವ ಬ್ಯೂಟಿ ಪಾರ್ಲರ್‌ಗೆ ತೆರಳಬಾರದು. ಅದು ನಿಷಿದ್ಧ ಎಂದು ಉತ್ತರ ಪ್ರದೇಶದ ಸಹರಾನ್‌ಪುರದ ಮೌಲ್ವಿಯೊಬ್ಬರು ಹೇಳಿದ್ದಾರೆ. ಇಸ್ಲಾಂನಲ್ಲಿ ಮಹಿಳೆಯರು ಬ್ಯೂಟಿ ಪಾರ್ಲರ್‌ಗೆ ತೆರಳುವುದು ನಿಷಿದ್ಧವಾಗಿದ್ದು, ಕಾನೂನು ಬಾಹಿರವಾಗಿದೆ. ಅಲ್ಲದೇ ಇದನ್ನು ಇಸ್ಲಾಂನಲ್ಲಿ ಬಹಿಷ್ಕರಿಸಲಾಗಿದೆ ಎಂದು ಹೇಳಿದ್ದಾರೆ. ಕಳೆದ ತಿಂಗಳು ಕಾನ್ಪುರದಲ್ಲಿ ನೆಲೆಸಿದ್ದ ಮಹಿಳೆಯೊಬ್ಬರು ಬ್ಯೂಟಿ ಪಾರ್ಲರ್‌ನಲ್ಲಿ ಐಬ್ರೋ ಮಾಡಿಸಿಕೊಂಡಿದ್ದರು ಇದರಿಂದ ಕೋಪೋದ್ರಿಕ್ತರಾಗಿದ್ದ ಮಹಿಳೆಯ ಪತಿ, ಸೌದಿ ಅರೇಬಿಯಾದಿಂದಲೇ ವಿಡಿಯೋ ಕಾಲ್‌ನಲ್ಲಿ ತ್ರಿವಳಿ ತಲಾಕ್‌ ನೀಡಿದ್ದರು.