ಸಾರಾಂಶ
ನವದೆಹಲಿ: ಅಸ್ಸಾಂನ ಅಹೋಮ್ ರಾಜ ಮನೆತನದ ‘ದಿಬ್ಬ ಸಮಾಧಿ’ ಆಗಿರುವ ‘ಮೊಯ್ಡಮ್ಸ್’ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿದೆ. ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ಭಾರತದ 43ನೇ ತಾಣ ಇದಾಗಿದ್ದು, ಸಾಂಸ್ಕೃತಿಕ ತಾಣಗಳ ವಿಭಾಗದಲ್ಲಿ ಸೇರ್ಪಡೆಗೊಂಡ ಈಶಾನ್ಯ ಭಾರತದ ಮೊದಲ ಸ್ಥಳವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ 46ನೇ ವಿಶ್ವಪಾರಂಪರಿಕ ಸಮ್ಮೇಳನದಲ್ಲಿ ಮೊಯ್ಡಮ್ಸ್ ಹೆಸರು ಘೋಷಣೆಯಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಅನೇಕರು ಹರ್ಷಿಸಿದ್ದಾರೆ.
ಏನಿದು ಮೊಯ್ಡಮ್ಸ್?:
ಮೊಯ್ಡಮ್ಸ್ ಪಿರಾಮಿಡ್ ಆಕೃತಿಯಲ್ಲಿರುತ್ತದೆ. ಚಿಕ್ಕ ಮಣ್ಣಿನ ದಿಬ್ಬಗಳಿಗೆ ಬಾಗಿಲು ಇರುತ್ತಿದ್ದು, ಒಳಗಡೆ ಕಮಾನುಗಳನ್ನು ಹೊಂದಿದೆ. ಇದೊಂದು ಸಮಾಧಿ ಸ್ಥಳ. ಈ ಸಮಾಧಿಗಳು ಸುಮಾರು 600 ವರ್ಷಗಳ ಹಿಂದೆ ಅಸ್ಸಾಂ ಆಳುತ್ತಿದ್ದ ತೈ- ಅಹೋಮ್ ರಾಜವಂಶದವರ ಸಮಾಧಿಗಳಾಗಿವೆ.
ಈ ಸಮಾಧಿ, ಅಹೋಮ್ ರಾಜವಂಶಸ್ಥರ ಅಂತ್ಯಕ್ರಿಯೆ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಮಣ್ಣಿನ ದಿಬ್ಬಗಳ ಮೇಲೆ ಇಟ್ಟಿಗೆ ಮತ್ತು ಮಣ್ಣಿನ ಪದರಗಳನ್ನು ಹಾಕಲಾಗುತ್ತದೆ. ಬಳಿಕ ಆ ದಿಬ್ಬವನ್ನು ಸಸ್ಯದಿಂದ ಮುಚ್ಚಲಾಗುತ್ತದೆ. ಇಲ್ಲಿ ರಾಜರು ಬಳಸಿದ ರಾಜ ಚಿಹ್ನೆಗಳು, ಚಿನ್ನದ ಪೆಂಡೆಂಟ್‌ಗಳು ಶಸ್ತ್ರಾಸ್ತ್ರಗಳು ಸೇರಿದಂತೆ ಇತರ ವಸ್ತುಗಳನ್ನು ಇರಿಸಿ ರಾಜನೊಂದಿಗೆ ಸಮಾಧಿ ಮಾಡಲಾಗುತ್ತದೆ.
)
;Resize=(128,128))
;Resize=(128,128))
;Resize=(128,128))
;Resize=(128,128))