ಬಿಹಾರದಿಂದ ಬರಿಗಣ್ಣಿಗೆ ಮೌಂಟ್‌ ಎವರೆಸ್ಟ್‌ ಗೋಚರ

| N/A | Published : Oct 10 2025, 01:02 AM IST

ಸಾರಾಂಶ

ವಾಯುಗುಣಮಟ್ಟದಲ್ಲಿ ಭಾರೀ ಸುಧಾರಣೆ ಹಿನ್ನೆಲೆಯಲ್ಲಿ ನೇಪಾಳದಲ್ಲಿರುವ ವಿಶ್ವದ ಅತಿ ಎತ್ತರದ ಹಿಮಶಿಖರವಾದ ಮೌಂಟ್‌ ಎವರೆಸ್ಟ್‌ ಇದೀಗ ಬಿಹಾರದಿಂದಲೇ ಬರಿಗಣ್ಣಿಗೆ ಗೋಚರವಾಗುತ್ತಿದೆ. ನೇಪಾಳಕ್ಕೆ ಗಡಿಗೆ ಹೊಂದಿರುವ ಮಧುಬನಿ ಜಿಲ್ಲೆಯ ಜಯನಗರವೆಂಬ ಸಣ್ಣ ಪಟ್ಟಣದಲ್ಲಿ ಬರಿಗಣ್ಣಿನಿಂದ ಎವರೆಸ್ಟ್‌ ನೋಡಬಹುದಾಗಿದೆ.

 ಪಟನಾ: ವಾಯುಗುಣಮಟ್ಟದಲ್ಲಿ ಭಾರೀ ಸುಧಾರಣೆ ಹಿನ್ನೆಲೆಯಲ್ಲಿ ನೇಪಾಳದಲ್ಲಿರುವ ವಿಶ್ವದ ಅತಿ ಎತ್ತರದ ಹಿಮಶಿಖರವಾದ ಮೌಂಟ್‌ ಎವರೆಸ್ಟ್‌ ಇದೀಗ ಬಿಹಾರದಿಂದಲೇ ಬರಿಗಣ್ಣಿಗೆ ಗೋಚರವಾಗುತ್ತಿದೆ.

ನೇಪಾಳಕ್ಕೆ ಗಡಿಗೆ ಹೊಂದಿರುವ ಮಧುಬನಿ ಜಿಲ್ಲೆಯ ಜಯನಗರವೆಂಬ ಸಣ್ಣ ಪಟ್ಟಣದಲ್ಲಿ ಬರಿಗಣ್ಣಿನಿಂದ ಎವರೆಸ್ಟ್‌ ನೋಡಬಹುದಾಗಿದೆ. ಜಯನಗರಕ್ಕೆ ಎವರೆಸ್ಟ್‌ ಶಿಖರದ ಬೇಸ್‌ ಕ್ಯಾಂಪ್‌ 200 ಕಿ.ಮೀ.ಗಿಂತ ಕಡಿಮೆ ದೂರವಿದೆ.

ಎವರೆಸ್ಟ್‌ ಜೊತೆಗೆ ತಮ್ಶೆರ್ಕು, ಲೋಟ್ಸೆ, ಶರ್ಟ್ಸೆ, ಮೆರಾ ಪೀಕ್‌, ಚಮ್ಲಾಂಗ್‌ ಮತ್ತು ಮಕಾಲು ಶಿಖರಗಳನ್ನು ನೋಡಬಹುದಾಗಿದೆ. ಈ ಹಿಂದೆ 2020ರ ಕೋವಿಡ್‌ ಲಾಕ್ಡೌನ್‌ ವೇಳೆಯಲ್ಲಿ ಮಾಲಿನ್ಯ ತಗ್ಗಿ ವಾಯುಗುಣಮಟ್ಟ ವೃದ್ಧಿಯಾದಾಗ ಸಹ ಈ ಪರ್ವತಶಿಖರ ಗೋಚರವಾಗಿತ್ತು. ಪಂಜಾಬ್‌ನ ಜಲಂಧರ್‌ನಿಂದಲೂ ಅದು ಕಂಡಿತ್ತು.

Read more Articles on