ಸಾರಾಂಶ
ಭೋಪಾಲ್: ಕೆಲವೇ ತಿಂಗಳ ಮೊದಲು ಭಾರೀ ಮಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೇರಿದ್ದ ಮಧ್ಯಪ್ರದೇಶದಲ್ಲಿ ತನ್ನ ಗೆಲುವಿನ ಲಹರಿಯನ್ನು ಲೋಕಸಭಾ ಚುನಾವಣೆಯಲ್ಲೂ ಮುಂದುವರೆಸಿದೆ. ಬಿಜೆಪಿ ಈ ಬಾರಿ ರಾಜ್ಯದ ಎಲ್ಲ 29 ಸ್ಥಾನಗಳಲ್ಲೂ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ಶೂನ್ಯ ಸಂಪಾದನೆ ಮಾಡುವ ಮೂಲಕ ಸಂಪೂರ್ಣ ನೆಲಕಚ್ಚಿದೆ.
ಬಿಜೆಪಿಯಲ್ಲಿ ಇತ್ತೀಚೆಗೆ ಪಕ್ಷ ಸೇರಿ ಕೇಂದ್ರ ವಿಮಾನಯಾನ ಸಚಿವರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ, ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಇಂದೋರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಹಿಂಡಪೆದ ಕಾರಣ ನಾಮಮಾತ್ರ ಸ್ಪರ್ಧೆಗೆ ನಿಂತಿದ್ದ ಬಿಜೆಪಿ ಹುರಿಯಾಳು ಶಂಕರ್ ಸಿಂಗ್ ಲಾಲ್ವಾನಿಯೂ ಸೇರಿದಂತೆ ಹಲವು ನಾಯಕರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ಸಂಪೂರ್ಣ ಮಕಾಡೆ ಮಲಗಿದ್ದು, ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಕಮಲ್‌ನಾಥ್ ಪುತ್ರ ನಕುಲ್‌ನಾಥ್ ಮುಂತಾದವರು ಪರಾಭವ ಆಗಿದ್ಧಾರೆ. ಅದರಲ್ಲೂ ಇಂದೋರ್ ಲೋಕಸಭಾ ಅಭ್ಯರ್ಥಿಯ ನಾಮಪತ್ರ ಹಿಂಪಡೆತದ ಮೂಲಕ ನೈತಿಕವಾಗಿ ಕುಸಿದಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಈ ಸೋಲು ಮತ್ತಷ್ಟು ಆಘಾತ ತಂದಿದೆ.
ಇಂದೋರ್‌ನಲ್ಲಿ ಪ್ರಬಲ ಎದುರಾಳಿ ಇಲ್ಲದ ಕಾರಣ ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ ದಾಖಲೆಯ 11.75 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಪಕ್ಷ20242019ವ್ಯತ್ಯಾಸ
ಬಿಜೆಪಿ2928+1
ಕಾಂಗ್ರೆಸ್0001-1