ಸಾರಾಂಶ
ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿ ಜೈಲು ಪಾಲಾಗಿದ್ದ ಉತ್ತರ ಪ್ರದೇಶದ ಡಾನ್ ಕಂ ರಾಜಕಾರಣಿ ಮುಖ್ತಾರ್ ಅನ್ಸಾರಿ ಗುರುವಾರ ರಾತ್ರಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.
ಬಂದಾ (ಉ.ಪ್ರ.): ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿ ಜೈಲು ಪಾಲಾಗಿದ್ದ ಉತ್ತರ ಪ್ರದೇಶದ ಡಾನ್ ಕಂ ರಾಜಕಾರಣಿ ಮುಖ್ತಾರ್ ಅನ್ಸಾರಿ ಗುರುವಾರ ರಾತ್ರಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.
60 ವರ್ಷ ವಯಸ್ಸಿನ ಅನ್ಸಾರಿಗೆ ಅವರ ''''''''ರೋಜಾ'''''''' (ಪವಿತ್ರ ರಂಜಾನ್ ತಿಂಗಳಲ್ಲಿ ಮುಸ್ಲಿಮರ ಉಪವಾಸ) ಮುರಿದ ನಂತರ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಬಳಿಕ ಆಸ್ಪತ್ರೆಯಲ್ಲಿ ಆತ ಸಾನ್ನಪ್ಪಿದ ಎಂದು ಮೂಲಗಳು ಹೇಳಿವೆ.
ಮಾರ್ಚ್ 23 ರಂದು ಸಹ, ಹೊಟ್ಟೆ ನೋವಿನ ಬಗ್ಗೆ ದೂರು ನೀಡಿದ ನಂತರ ಮುಖ್ತಾರ್ ಅನ್ಸಾರಿ 14 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಆಗ ಆತನಿಗೆ ವಿಶಪ್ರಾಶನ ಮಾಡಲಾಗಿದೆ ಎಂದು ಬಂಧುಗಳು ದೂರಿದ್ದರು.ಮುಖ್ತಾರ್ ಅನ್ಸಾರಿ ಮೌ ಸದರ್ ಕ್ಷೇತ್ರದಿಂದ 5 ಬಾರಿ ಮಾಜಿ ಶಾಸಕ ಆಗಿದ್ದ.
ಆತನ ವಿರುದ್ಧ 60 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಇವೆ. 2005ರ ನಂತರ ಆತ ಜೈಲು ಪಾಲಾಗಿದ್ದ. 8 ಪ್ರಕರಣಗಳಲ್ಲಿ ಅನ್ಸಾರಿಗೆ ಶಿಕ್ಷೆ ವಿಧಿಸಿ ಉತ್ತರ ಪ್ರದೇಶದ ಬಂದಾ ಜೈಲಿನಲ್ಲಿ ಇರಿಸಲಾಗಿತ್ತು.