ಸಾರಾಂಶ
ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆ ಒಡ್ಡಿದ ಸಂದೇಶವೊಂದನ್ನು ಮುಂಬೈ ಪೊಲೀಸರಿಗೆ ಶನಿವಾರ ಕಳಿಸಲಾಗಿದೆ.
ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆ ಒಡ್ಡಿದ ಸಂದೇಶವೊಂದನ್ನು ಮುಂಬೈ ಪೊಲೀಸರಿಗೆ ಶನಿವಾರ ಕಳಿಸಲಾಗಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಂದೇಶ ರವಾನೆಯಾದ ಸಂಖ್ಯೆಯನ್ನು ಟ್ರೇಸ್ ಮಾಡಿದ್ದು, ಅದು ರಾಜಸ್ಥಾನದ ಅಜ್ಮೇರ್‌ನಲ್ಲಿ ಪತ್ತೆಯಾಗಿದೆ. ಸಂಚಾರಿ ಪೊಲೀಸರ ವಾಟ್ಸ್‌ಅಪ್ ಸಹಾಯವಾಣಿ ಸಂಖ್ಯೆಗೆ ಐಎಸ್‌ಐ ಏಜೆಂಟ್ ಎಂದು ಪರಿಚಯಿಸಿಕೊಂಡ ಇಬ್ಬರು ಕಳಿಸಿದ ಸಂದೇಶದಲ್ಲಿ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಲಾಗಿದೆ.ಸಂದೇಶವನ್ನು ಕಳಿಸಿದಾತ ಮಾನಸಿಕ ಅಸ್ವಸ್ಥನಾಗಿರಬಹುದು ಅಥವಾ ಮದ್ಯದ ನಶೆಯಲ್ಲಿ ಕೃತ್ಯ ಎಸಗಿರಬಹುದು ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಮೊದಲು ನಟ ಸಲ್ಮಾನ್ ಖಾನ್ ಅವರಿಗೂ ಬೆದರಿಕೆ ಒಡ್ಡಿ ಸಂಚಾರಿ ಪೊಲೀಸರ ವಾಟ್ಸ್‌ಅಪ್ ಸಹಾಯವಾಣಿಗೆ ಸಂದೇಶ ಕಳಿಸಲಾಗಿತ್ತು.