ದೇಶದ ಅತ್ಯಂತ ಶ್ರೀಮಂತ ಗಣೇಶ ಮಂಡಳಿ ಎಂದೇ ಪ್ರಸಿದ್ಧವಾಗಿರುವ ಮುಂಬೈನ ಜಿಎಸ್‌ಬಿ ಸೇವಾ ಮಂಡಳಿಯು ಈ ಬಾರಿಯ ಗಣೇಶೋತ್ಸವಕ್ಕಾಗಿ 703.27 ಕೋಟಿ ರು. ಮೊತ್ತದ ಬೃಹತ್ ವಿಮಾ ರಕ್ಷಣೆಯನ್ನು ಮಾಡಿಸಿದೆ.
- ಗಣಪಗೆ 66 ಕೆಜಿ ಚಿನ್ನ, 335 ಕೆಜಿ ಬೆಳ್ಳಿ ಆಭರಣ
- ಆಭರಣ, ಭಕ್ತರ ಸುರಕ್ಷತೆಗಾಗಿ ವಿಮಾ ಸೌಲಭ್ಯ- ಕಳೆದ ಸಲಕ್ಕಿಂತ 229 ಕೋಟಿ ರು. ಅಧಿಕ ವಿಮೆ
ಪಿಟಿಐ ಮುಂಬೈದೇಶದ ಅತ್ಯಂತ ಶ್ರೀಮಂತ ಗಣೇಶ ಮಂಡಳಿ ಎಂದೇ ಪ್ರಸಿದ್ಧವಾಗಿರುವ ಮುಂಬೈನ ಜಿಎಸ್‌ಬಿ ಸೇವಾ ಮಂಡಳಿಯು ಈ ಬಾರಿಯ ಗಣೇಶೋತ್ಸವಕ್ಕಾಗಿ 703.27 ಕೋಟಿ ರು. ಮೊತ್ತದ ಬೃಹತ್ ವಿಮಾ ರಕ್ಷಣೆಯನ್ನು ಮಾಡಿಸಿದೆ.
ಉತ್ಸವದ ವೇಳೆ ಏನಾದರೂ ಅವಘಡ ಸಂಭವಿಸಿದರೆ ಮಂಡಳಿಯ ಸ್ವತ್ತುಗಳು ಮತ್ತು ಭಕ್ತರ ಸುರಕ್ಷತೆಗಾಗಿ ಈ ವಿಮೆ ಮಾಡಿಸಲಾಗಿದೆ. ಕಳೆದ ವರ್ಷ ಮಂಡಳಿಯು 474 ಕೋಟಿ ರು. ಮೊತ್ತದ ವಿಮೆ ಮಾಡಿಸಿತ್ತು. ಮುಂಬೈನ ಕಿಂಗ್ಸ್ ಸರ್ಕಲ್‌ನಲ್ಲಿ 5 ದಿನಗಳ ಕಾಲ ನಡೆಯಲಿರುವ ಈ ಗಣೇಶೋತ್ಸವದ ಆಚರಣೆಗಾಗಿ ಗಣಪತಿ ಮೂರ್ತಿಯನ್ನು 66 ಕೆಜಿಗೂ ಅಧಿಕ ಚಿನ್ನ ಹಾಗೂ 335 ಕೆಜಿ ಬೆಳ್ಳಿಯ ಆಭರಣಗಳಿಂದ ಅಲಂಕರಿಸಲಾಗುತ್ತದೆ. ಈ ಆಭರಣಗಳನ್ನು ಭಕ್ತಾದಿಗಳು ಮಂಡಳಿಗೆ ಕಾಣಿಕೆಯಾಗಿ ನೀಡಿದ್ದಾರೆ. ಜಿಎಸ್‌ಬಿ ಸೇವಾ ಮಂಡಳಿಯ 72ನೇ ವರ್ಷದ ಗಣೇಶೋತ್ಸವವು ಸೆ.14ರಿಂದ 18ರವರೆಗೆ ವಿಜೃಂಭಣೆಯಿಂದ ಜರುಗಲಿದೆ.