‘ದೇಶದ ಮುಂದೆ ಹೊಸ ಸವಾಲುಗಳಿವೆ. ಹೊಸ ಸಾಮಾಜಿಕ ಅನಿಷ್ಟಗಳು ಹೊರಹೊಮ್ಮಿವೆ. ಇಂದು, ಅವುಗಳನ್ನು ಪರಿಹರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿಭಜಕ ಶಕ್ತಿಗಳ ವಿರುದ್ಧ ಸಮಾಜವನ್ನು ಒಗ್ಗೂಡಿಸಬೇಕಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕರೆ ನೀಡಿದ್ದಾರೆ.

ಪಿಟಿಐ ನವದೆಹಲಿ

ಇತ್ತೀಚೆಗೆ ವಿಪಕ್ಷಗಳು ಹಾಗೂ ಹೊಸ ಸಂಘಟನೆಯಾದ ಜಿರಳೆ ಜನತಾ ಪಕ್ಷ ದೇಶದಲ್ಲಿ ಹಲವು ಆಂದೋಲನಗಳನ್ನು ರೂಪಿಸಿವೆ. ಇದರ ಹಿಂದೆ ವಿದೇಶಿ ಪಿತೂರಿ ಕೂಡ ಇದೆ ಎಂದೂ ಕೆಲವು ವರದಿಗಳು ಹೇಳಿವೆ. ಅದರ ಬೆನ್ನಲ್ಲೇ ಮೋದಿ ಅವರ ಈ ಹೇಳಿಕೆ ಬಂದಿದೆ.ದೆಹಲಿಯಲ್ಲಿ ಚಿನ್ಮಯ ಅಮೃತ ಮಹೋತ್ಸವ ಜಾಗತಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಳೆದ ದಶಕಗಳಲ್ಲಿ, ದೇಶದ ಮುಂದೆ ಹೊಸ ಸವಾಲುಗಳು ಹುಟ್ಟಿಕೊಂಡಿವೆ, ಸಾಮಾಜಿಕ ಅನಿಷ್ಟಗಳು ಉದ್ಭವವಾಗಿವೆ. ಅವುಗಳನ್ನು ಪರಿಹರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ನಮ್ಮನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧ ನಾವು ಸಮಾಜವನ್ನು ಒಗ್ಗೂಡಿಸಬೇಕು. ನಾಗರಿಕರನ್ನು ಸ್ವಾವಲಂಬನೆಯತ್ತ ಜಾಗೃತಗೊಳಿಸಬೇಕು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದೊಂದಿಗೆ ನಾವು ಪ್ರತಿಯೊಬ್ಬ ವ್ಯಕ್ತಿಯನ್ನು ಸಂಪರ್ಕಿಸಬೇಕು. ಈ ಉದ್ದೇಶಗಳಿಗಾಗಿ, ನಾವು ಇನ್ನಷ್ಟು ಕ್ರಿಯಾಶೀಲರಾಗಬೇಕು’ ಎಂದು ಕರೆ ನೀಡಿದರು.