ಸಾರಾಂಶ
ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಿಡುಗಡೆಯಲ್ಲಿ ತಮ್ಮ ವೈಯಕ್ತಿಕ ಲಾಭವಿದೆ ಎಂಬ ಆರೋಪದ ಕುರಿತು ತಿರುಗೇಟು ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ನನ್ನ ಮೆದುಳಿನ ಬೆಲೆ ತಿಂಗಳಿಗೆ 200 ಕೋಟಿ ರು.. ನಾನು ಪ್ರಾಮಾಣಿಕತೆಯಿಂದ ಹಣ ಸಂಪಾದಿಸಿದ್ದೇನೆ ಎಂದಿದ್ದಾರೆ.
ನಾಗ್ಪುರ: ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಿಡುಗಡೆಯಲ್ಲಿ ತಮ್ಮ ವೈಯಕ್ತಿಕ ಲಾಭವಿದೆ ಎಂಬ ಆರೋಪದ ಕುರಿತು ತಿರುಗೇಟು ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ನನ್ನ ಮೆದುಳಿನ ಬೆಲೆ ತಿಂಗಳಿಗೆ 200 ಕೋಟಿ ರು.. ನಾನು ಪ್ರಾಮಾಣಿಕತೆಯಿಂದ ಹಣ ಸಂಪಾದಿಸಿದ್ದೇನೆ ಎಂದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ‘ಪ್ರಾಮಾಣಿಕವಾಗಿ ಹೇಗೆ ಉದ್ಯಮ ನಡೆಸಬಹುದು ಎಂಬ ಬಗ್ಗೆ ನಾನು ನನ್ನ ಮಗನಿಗೆ ಐಡಿಯಾಗಳನ್ನು ನೀಡುತ್ತೇನೆ. ಇತ್ತೀಚೆಗೆ ನನ್ನ ಮಗ ಇರಾನ್‌ನಿಂದ 800 ಕಂಟೇನರ್ ಸೇಬು ಆಮದು ಮಾಡಿಕೊಂಡ, ಅದೇ ವೇಳೆ ಅಲ್ಲಲಿಗೆ 1000 ಕಂಟೇನರ್ ಬಾಳೆಹಣ್ಣು ರಫ್ತು ಮಾಡಿದ. ಇದರ ಹೊರತಾಗಿ ನಾನು ಸಕ್ಕರೆ, ಡಿಸ್ಟಿಲರಿ, ವಿದ್ಯುತ್ ಸ್ಥಾವರ ಹೊಂದಿದ್ದೇನೆ. ನನ್ನ ಆದಾಯ ಸಾಕಷ್ಟಿದೆ. ನನ್ನ ಮೆದುಳು ತಿಂಗಳಿಗೆ 200 ಕೋಟಿ ಮೌಲ್ಯದ್ದಾಗಿದೆ. ನನಗೆ ಹಣದ ಕೊರತೆಯಿಲ್ಲ’ ಎಂದು ಹೇಳಿದರು.