ನಟ ಸೈಫ್‌ ಅಲಿಖಾನ್ ತಮ್ಮ ಮೇಲಿನ ಚಾಕು ದಾಳಿ ಬಗ್ಗೆ ಪೊಲೀಸರಿಗೆ ನೀಡಿರುವ ಹೇಳಿಕೆ ಬಯಲಾಗಿದೆ. ‘ಸ್ಟಾಫ್‌ ನರ್ಸ್‌ ಮೇಲೆ ದಾಳಿ ಮಾಡುತ್ತಿದ್ದ ದಾಳಿಕೋರನನ್ನು ಬಿಗಿಯಾಗಿ ಹಿಡಿದೆ. ಆದರೆ ಅವನು ಚಾಕು ಇರಿದು ನನ್ನ ಕೈಯಿಂದ ತಪ್ಪಿಸಿಕೊಂಡು ಓಡಿದ’ ಎಂದಿದ್ದಾರೆ.

ಮುಂಬೈ: ನಟ ಸೈಫ್‌ ಅಲಿಖಾನ್ ತಮ್ಮ ಮೇಲಿನ ಚಾಕು ದಾಳಿ ಬಗ್ಗೆ ಪೊಲೀಸರಿಗೆ ನೀಡಿರುವ ಹೇಳಿಕೆ ಬಯಲಾಗಿದೆ. ‘ಸ್ಟಾಫ್‌ ನರ್ಸ್‌ ಮೇಲೆ ದಾಳಿ ಮಾಡುತ್ತಿದ್ದ ದಾಳಿಕೋರನನ್ನು ಬಿಗಿಯಾಗಿ ಹಿಡಿದೆ. ಆದರೆ ಅವನು ಚಾಕು ಇರಿದು ನನ್ನ ಕೈಯಿಂದ ತಪ್ಪಿಸಿಕೊಂಡು ಓಡಿದ’ ಎಂದಿದ್ದಾರೆ.

‘ದಾಳಿಕೋರ ನನ್ನ ಮನೆಯೊಳಗೆ ಬಂದಾಗ ಆತನನ್ನು ನನ್ನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಎಲಿಯಮ್ಮ ಫಿಲಿಪ್ ಎದುರಾದರು. ಬೆದರಿಕೆ ಹಾಕಿದಾಗ ಅವರು ಕೂಗಿದರು. ಆಗ ನಾನು ಮತ್ತು ಕರೀನಾ ಬೆಡ್‌ ರೂಂನಿಂದ ಕೆಳಗೆ ಬಂದೆವು. ಆಗ ನಾನು ‘ಕಳ್ಳನನ್ನು’ ಹಿಡಿದುಕೊಂಡೆ. ಆದರೆ ಅಷ್ಟರೊಳಗೆ ಆತ ನನಗೆ ಚಾಕುವಿನಿಂದ ಇರಿದು, ನನ್ನ ಕೈಯಿಂದ ತಪ್ಪಿಸಿಕೊಂಡು ಪರಾರಿಯಾದ’ ಎಂದಿದ್ದಾರೆ. ಎಲಿಯಮ್ಮ ಬಳಿ ಆತ ಫಿಲಿಪ್‌ರಿಂದ 1 ಕೋಟಿ ರು. ಹಣಕ್ಕೆ ಬೇಡಿಕೆಯಿಟ್ಟಿದ್ದ ಎಂದೂ ಸೈಫ್‌ ಹೇಳಿದ್ದಾರೆ.

ಸೈಫ್‌ ದಾಳಿಕೋರನ ಫೇಸ್‌ ರಿಕಗ್ನಿಷನ್‌ಗೆ ಪೊಲೀಸರ ನಿರ್ಧಾರ

ಮುಂಬೈ: ನಟ ಸೈಫ್‌ ಅಲಿಖಾನ್‌ಗೆ ಇರಿತ ಪ್ರಕರಣದ ಆರೋಪದಲ್ಲಿ ಬಂಧಿತನಾಗಿರುವ ಶೆಹಜಾದ್‌ ಮತ್ತು ಸಿಸಿಟೀವಿಯಲ್ಲಿರುವ ವ್ಯಕ್ತಿ ಇಬ್ಬರು ಬೇರೆ ಎಂದು ಆತನ ತಂದೆ ಆರೋಪಿಸಿದ ಬೆನ್ನಲ್ಲೇ ಪೊಲೀಸರು ದಾಳಿಕೋರನ ಮುಖ ಗುರುತಿಸುವಿಕೆ ಪರೀಕ್ಷೆ ನಡೆಸುವುದಾಗಿ ಕೋರ್ಟಿಗೆ ಹೇಳಿದ್ದಾರೆ. ಇದರ ಬೆನ್ನಲ್ಲೇ ಆತನ ಪೊಲೀಸ್‌ ಕಸ್ಟಡಿಯನ್ನು ಕೋರ್ಟ್ ಜ.29ರವರೆಗೆ ವಿಸ್ತರಿಸಿದೆ 

ಪೊಲೀಸರ ಬಂಧನದಲ್ಲಿರುವ ಶೆಹಜಾದ್‌ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ಪೊಲೀಸರು 7 ದಿನಗಳ ಕಾಲಕಸ್ಟಡಿ ಅವಧಿ ವಿಸ್ತರಿಸುವಂತೆ ಮನವಿ ಮಾಡಿದ್ದರು