ಹರ್ಯಾಣ ಐಎನ್‌ಎಲ್‌ಡಿ ನಾಯಕ ನಫೆ ಸಿಂಗ್‌ ಬರ್ಬರ ಹತ್ಯೆ

| Published : Feb 26 2024, 01:33 AM IST

ಸಾರಾಂಶ

ಐಎನ್‌ಎಲ್‌ಡಿ ಪಕ್ಷದ ಹರ್‍ಯಾಣ ಅಧ್ಯಕ್ಷರಾಗಿದ್ದ ನಫೆ ಸಿಂಗ್‌ ರಾಠಿ ಅವರು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ.

ಚಂಡೀಗಢ: ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ಪಕ್ಷದ ಹರ್ಯಾಣ ಘಟಕದ ಅಧ್ಯಕ್ಷ ನಫೆ ಸಿಂಗ್‌ ರಾಠಿ ಅವರನ್ನು ಬಂದೂಕುಧಾರಿಗಳು ಭಾನುವಾರ ಸಂಜೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ.

ಹರ್ಯಾಣದ ಝಜ್ಜರ್‌ ಜಿಲ್ಲೆಯಲ್ಲಿ ನಾಫೆ ಸಿಂಗ್‌ ತಮ್ಮ ಎಸ್‌ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಈ ವೇಳೆ ಮತ್ತೊಂದು ಕಾರಿನಲ್ಲಿ ಬಂದ ದಾಳಿಕೋರರು ಏಕಾಏಕಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಈ ಕುರಿತು ಐಎನ್‌ಎಲ್‌ಡಿ ಪಕ್ಷದ ನಾಯಕ ಅಭಯ್‌ ಚೌಟಾಯಾ ಮಾತನಾಡಿ, ರಾಜ್ಯದಲ್ಲಿ ಕಾನೂನು ಹದಗೆಟ್ಟಿದೆ.

ಈ ಕೂಡಲೇ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ನಫೇ ಸಿಂಗ್‌ ಈ ಹಿಂದೆ ಹರ್ಯಾಣ ಶಾಸಕರಾಗಿದ್ದರು.