ಓವರ್‌ಟೈಂ ಕೆಲಸಕ್ಕೆ ಇನ್ಫೋಸಿಸ್‌ ಬ್ರೇಕ್‌

| Published : Jul 02 2025, 12:19 AM IST / Updated: Jul 02 2025, 12:20 AM IST

ಓವರ್‌ಟೈಂ ಕೆಲಸಕ್ಕೆ ಇನ್ಫೋಸಿಸ್‌ ಬ್ರೇಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿ ಚರ್ಚೆ ಹುಟ್ಟುಹಾಕಿದ್ದ ಎನ್‌.ಆರ್‌. ನಾರಾಯಣ ಮೂರ್ತಿ ಅವರಿಂದ ಸ್ಥಾಪಿತ ಕಂಪನಿಯಾದ ಇನ್ಫೋಸಿಸ್‌ ಈಗ ತನ್ನ ಉದ್ಯೋಗಿಗಳಿಗೆ ಅವಧಿ ಮೀರಿ ಕೆಲಸ ಮಾಡದಂತೆ ಸೂಚಿಸಿದೆ.

- ದಿನಕ್ಕೆ 9.15 ಗಂಟೆಗಿಂತ ಹೆಚ್ಚು ಕೆಲಸ ಬೇಡ: ಇನ್ಫೋಸಿಸ್‌

- ಕೆಲಸ-ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಪಾಡಿ

- ಕಂಪನಿ ಸಂಸ್ಥಾಪಕನ 70 ಗಂಟೆ ಕೆಲಸದ ಕರೆಗೆ ವ್ಯತಿರಿಕ್ತ ನಿಲವು

ಬೆಂಗಳೂರು: ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿ ಚರ್ಚೆ ಹುಟ್ಟುಹಾಕಿದ್ದ ಎನ್‌.ಆರ್‌. ನಾರಾಯಣ ಮೂರ್ತಿ ಅವರಿಂದ ಸ್ಥಾಪಿತ ಕಂಪನಿಯಾದ ಇನ್ಫೋಸಿಸ್‌ ಈಗ ತನ್ನ ಉದ್ಯೋಗಿಗಳಿಗೆ ಅವಧಿ ಮೀರಿ ಕೆಲಸ ಮಾಡದಂತೆ ಸೂಚಿಸಿದೆ.

ಈ ಬಗ್ಗೆ ಕಂಪನಿಯ ಮಾನವ ಸಂಪನ್ಮೂಲ ವಿಭಾಗವು ನೌಕರರಿಗೆ ಇ-ಮೇಲ್‌ ಸಂದೇಶ ಕಳಿಸಿದೆ. ‘ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಮನೆಯಿಂದಲೇ ಕೆಲಸ ಮಾಡುವ (ವರ್ಕ್‌ ಫ್ರಂ ಹೋಂ) ಮಾಡುತ್ತಿರುವ ನೌಕರರು ಕೂಡ ದಿನಕ್ಕೆ 9.15 ಗಂಟೆ ಮೀರಿ ಕೆಲಸ ಮಾಡಬಾರದು. ಆರೋಗ್ಯದ ಕಡೆ ಗಮನ ಹರಿಸಬೇಕು. ವೈಯಕ್ತಿಕ ಸ್ವಾಸ್ಥ್ಯ ಕಾಪಾಡಿಕೊಂಡರೆ ಪರಿಣಾಮಕಾರಿಯಾಗಿ ದೀರ್ಘಾವಧಿ ಕೆಲಸ ಮಾಡಲು ಸಾಧ್ಯ’ ಎಂದು ಸೂಚಿಸಿದೆ.ಕೆಲ ತಿಂಗಳ ಹಿಂದೆ, ಇದೇ ಇನ್ಫಿ ಮೂರ್ತಿ ‘ದೇಶ ಅಭಿವೃದ್ಧಿ ಹೊಂದಲು ವಾರಕ್ಕೆ 70 ದಿನ ಕೆಲಸ ಮಾಡಬೇಕು’ ಎಂದು ಕರೆ ನೀಡಿದ್ದರು. ಬೆರಳೆಣಿಕೆಯಷ್ಟು ಜನ ಇದನ್ನು ಬೆಂಬಲಿಸಿದರಾದರೂ, ಅನೇಕರಿಂದ ಭಾರೀ ಟೀಕೆಗಳು ವ್ಯಕ್ತವಾಗಿದ್ದವು.