ಸಾರಾಂಶ
ಹಿಂದುಳಿದವರಿಗೆ ಆರ್ಥಿಕ ಸಹಾಯ, ಉದ್ಯೋಗಕ್ಕೆ ಉತ್ತೇಜನ ನೀಡುವ ಪ್ರಧಾನಮಂತ್ರಿ ಸಾಮಾಜಿಕ ಉನ್ನತಿ ಮತ್ತು ಉದ್ಯೋಗ ಆಧಾರಿತ ಜನಕಲ್ಯಾಣ ಪೋರ್ಟಲ್(ಪಿಎಂ ಸೂರಜ್)ಗೆ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ
ನವದೆಹಲಿ: ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಜನಾಂಗ ಮತ್ತು ಸಫಾಯಿ ಕರ್ಮಚಾರಿಗಳಿಗೆ ಆರ್ಥಿಕ ಸಹಾಯ ಮತ್ತು ಉದ್ಯೋಗಕ್ಕೆ ನೆರವಾಗಲು ಸಹಾಯಕವಾಗುವಮತೆ ಪಿಎಂ ಸೂರಜ್ ಪೋರ್ಟಲ್‌ನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು.ಈ ವೇಳೆ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳೇ ಸರ್ಕಾರದ ಅತಿದೊಡ್ಡ ಫಲಾನುಭವಿಗಳಾಗಿದ್ದು, ಅವರಿಗೆ ಸೌಲಭ್ಯ ಕಲ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಪಿಎಂ ಸೂರಜ್ ಪೋರ್ಟಲ್ ಲೋಕಾರ್ಪಣೆ ಮಾಡಿದೆ. ಇದರ ಮೂಲಕ ಸಫಾಯಿ ಕರ್ಮಚಾರಿಗಳೂ ಸೇರಿದಂತೆ ಶೋಷಿತ ಸಮುದಾಯಗಳಿಗೆ ಸರ್ಕಾರದ ಆರ್ಥಿಕ ಸಹಾಯಗಳು ಮತ್ತು ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಲಾಗುತ್ತದೆ’ ಎಂದು ತಿಳಿಸಿದರು.
ಅಲ್ಲದೆ ಇಲ್ಲಿಯವರೆಗೂ ಶೋಷಿತ ಸಮುದಾಯದ 1 ಲಕ್ಷ ಮಂದಿ ಸರ್ಕಾರದಿಂದ 720 ಕೋಟಿ ರು. ಸಹಾಯಧನ ಪಡೆದುಕೊಂಡಿದ್ದಾರೆ ಎಂದರು.