ಕ್ಯಾನ್ಸರ್‌ ತಗುಲಿರುವ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ನರೇಶ್‌ ಗೋಯಲ್‌ ಸಾಮಾನ್ಯ ಬೇಲ್‌ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ, ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ತಾವು ಕ್ಯಾನ್ಸರ್‌ಗೆ ತುತ್ತಾಗಿದ್ದು ಚಿಕಿತ್ಸೆಗಾಗಿ ಸಾಮಾನ್ಯ ಜಾಮೀನು ನೀಡುವಂತೆ ಸ್ಥಳೀಯ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.ವೈದ್ಯಕೀಯ ತಪಾಸಣೆಗಾಗಿ ಇತ್ತೀಚೆಗೆ ಪಡೆದಿದ್ದ ತುರ್ತು ಜಾಮೀನಿನ ವೇಳೆ ತಮ್ಮ ದೇಹದಲ್ಲಿ ನಿಧನವಾಗಿ ಬೆಳವಣಿಗೆ ಹೊಂದುತ್ತಿರುವ ಕ್ಯಾನ್ಸರ್‌ ಪತ್ತೆಯಾಗಿದೆ. ಇದನ್ನು ತಡೆಯಲು ತಕ್ಷಣವೇ ವಿವಿಧ ರೀತಿಯ ಚಿಕಿತ್ಸೆಗೆ ಖಾಸಗಿ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ತಮಗೆ ಸಾಮಾನ್ಯ ಜಾಮೀನು ನೀಡುವಂತೆ ಗೋಯಲ್‌ ಮನವಿ ಮಾಡಿದ್ದಾರೆ.ಗೋಯಲ್‌ ಅವರ ಪತ್ನಿ ಅನಿತಾ ಕೂಡಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಪುತ್ರಿ ಕೂಡಾ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ನನ್ನ ಪತ್ನಿ ಆರೈಕೆಗೆ ಯಾರೂ ಇಲ್ಲ. ಹೀಗೆ ಆದರೆ ನಾನು ಜೈಲಲ್ಲೇ ಕೊರಗಿ ಕೊರಗಿ ಸಾಯುತ್ತೇನೆ ಎಂದು ಕಳೆದ ನವೆಂಬರ್‌ನಲ್ಲಿ ಗೋಯಲ್‌ ಕೋರ್ಟ್‌ ಮುಂದೆ ಗೋಳಾಡಿದ್ದರು.