2022ನೇ ಸಾಲಿನ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಕಟ : ಕನ್ನಡದ ರಿಷಬ್‌ ಶೆಟ್ಟಿ ‘ಕಾಂತಾರ’ದಲ್ಲಿನ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ

| Published : Aug 17 2024, 12:46 AM IST / Updated: Aug 17 2024, 05:20 AM IST

National Film Awards Kantara director hero Rishab Shetty profile
2022ನೇ ಸಾಲಿನ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಕಟ : ಕನ್ನಡದ ರಿಷಬ್‌ ಶೆಟ್ಟಿ ‘ಕಾಂತಾರ’ದಲ್ಲಿನ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಪ್ರತಿವರ್ಷ ನೀಡುವ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳ 2022ನೇ ಸಾಲಿನ ಪ್ರಶಸ್ತಿಗಳು ಶುಕ್ರವಾರ ಪ್ರಕಟವಾಗಿದ್ದು, ದಕ್ಷಿಣದ ನಟ-ನಟಿಯರು ಹಾಗೂ ನಿರ್ದೇಶಕರು ಸಿಂಹಪಾಲು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

 ನವದೆಹಲಿ :  ಕೇಂದ್ರ ಸರ್ಕಾರ ಪ್ರತಿವರ್ಷ ನೀಡುವ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳ 2022ನೇ ಸಾಲಿನ ಪ್ರಶಸ್ತಿಗಳು ಶುಕ್ರವಾರ ಪ್ರಕಟವಾಗಿದ್ದು, ದಕ್ಷಿಣದ ನಟ-ನಟಿಯರು ಹಾಗೂ ನಿರ್ದೇಶಕರು ಸಿಂಹಪಾಲು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.ಮಲಯಾಳಂನ ‘ಆಟ್ಟಂ: ದಿ ಪ್ಲೇ’ ಚಿತ್ರ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗೆದ್ದುಕೊಂಡಿದೆ. 

ಕನ್ನಡದ ಖ್ಯಾತ ನಟ ರಿಷಬ್‌ ಶೆಟ್ಟಿ ‘ಕಾಂತಾರ’ದಲ್ಲಿನ ನಟನೆಗಾಗಿ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬೆಂಗಳೂರು ಮೂಲದ ನಿತ್ಯಾ ಮೆನನ್‌ ತಮಿಳು ಚಿತ್ರ ‘ತಿರುಚಿ ತ್ರಂಬಲಮ್‌’ಗಾಗಿ ಹಾಗೂ ಮಾನಸಿ ಪಾರೇಖ್‌ ಗುಜರಾತಿ ಚಿತ್ರ ‘ಕಚ್‌ ಎಕ್ಸ್‌ಪ್ರೆಸ್‌’ಗಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.70ನೇ ರಾಷ್ಟ್ರೀಯ ಚಿತ್ರ ಪ್ರಶಸ್ತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಈ ಬಾರಿ ಬಾಲಿವುಡ್‌ನ ಏಕೈಕ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

 ಹಿಂದಿಯ ‘ಊಂಚಾಯಿ’ ಚಿತ್ರಕ್ಕಾಗಿ ಸೂರಜ್‌ ಬಾರ್ಜತ್ಯ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಇದೇ ಸಿನಿಮಾದಲ್ಲಿನ ಅಭಿನಯಕ್ಕಾಗಿ ನೀನಾ ಗುಪ್ತಾ ಅವರು ಅತ್ಯುತ್ತಮ ಸಹ ನಟಿ ಪ್ರಶಸ್ತಿ ಪಡೆದಿದ್ದಾರೆ.ಫೀಚರ್‌ ಫಿಲ್ಮ್‌ ವಿಭಾಗದಲ್ಲಿ ಜೂರಿ ಕಮಿಟಿಯ ಮುಖ್ಯಸ್ಥ ರಾಹುಲ್‌ ರಾವೇಲ್‌ ಹಾಗೂ ನಾನ್‌-ಫೀಚರ್‌ ಫಿಲ್ಮ್‌ ವಿಭಾಗದಲ್ಲಿ ನಿಲಾ ಮಧಬ್‌ ಪಾಂಡಾ ಪ್ರಶಸ್ತಿಗಳನ್ನು ಪ್ರಕಟಿಸಿದರು.

ರೆಹ್ಮಾನ್‌, ಬಾಂಬೆ ಜಯಶ್ರೀಗೆ ಪ್ರಶಸ್ತಿ:

ಶರ್ಮಿಳಾ ಟ್ಯಾಗೋರ್‌ ಮತ್ತು ಮನೋಜ್‌ ಬಾಜಪೈ ಅಭಿನಯದ ಹಿಂದಿ ಚಿತ್ರ ‘ಗುಲ್‌ಮೊಹರ್‌’ ಅತ್ಯುತ್ತಮ ಹಿಂದಿ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಎ.ಆರ್‌.ರೆಹಮಾನ್‌ ಅವರಿಗೆ ‘ಪೊನ್ನಿಯನ್‌ ಸೆಲ್ವನ್‌- ಪಾರ್ಟ್‌ 1’ ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ (ಹಿನ್ನೆಲೆ) ಪ್ರಶಸ್ತಿ ಲಭಿಸಿದೆ. ‘ಬ್ರಹ್ಮಾಸ್ತ್ರ ಪಾರ್ಟ್‌-1’ ಚಿತ್ರಕ್ಕಾಗಿ ಪ್ರೀತಂ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಅರಿಜಿತ್‌ ಸಿಂಗ್‌ ಅವರಿಗೆ ‘ಕೇಸರಿಯಾ’ ಹಾಡಿಗಾಗಿ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ಪ್ರಶಸ್ತಿ ಲಭಿಸಿದೆ. ಬಾಂಬೆ ಜಯಶ್ರೀ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ‘ಚಾಯುಮ್‌ ವೆಯಿಲ್‌’ ಹಾಡಿಗಾಗಿ ಸಂದಿದೆ.‘ಆಟ್ಟಂ’ ಚಿತ್ರಕ್ಕೆ ಅತ್ಯುತ್ತಮ ಚಿತ್ರಕತೆ ಹಾಗೂ ಅತ್ಯುತ್ತಮ ಸಂಕಲನ ಪ್ರಶಸ್ತಿ ಕೂಡ ಲಭಿಸಿದೆ.