ಸಾರಾಂಶ
ನಿಗೂಢ ಅಡಿಬರಹ ದಾಖಲಿಸಿರುವ ನಯನತಾರಾ ತಮ್ಮ ಪತಿ ವಿಘ್ನೇಶ್ ಶಿವನ್ ಅವರನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಅನ್‌ಫಾಲೋ ಮಾಡಿದ್ದಾರೆ.
ಮುಂಬೈ: ಖ್ಯಾತ ನಟಿ ನಯನತಾರಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ತಮ್ಮ ಪತಿ ವಿಘ್ನೇಶ್ ಶಿವನ್ ಅವರನ್ನು ಅನ್‌ಫಾಲೋ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ ಅವರು ನಿಗೂಢ ಸಂದೇಶವನ್ನೂ ಹಾಕಿಕೊಂಡಿದ್ದು, ‘ಆಕೆ ಶಾಶ್ವತವಾಗಿ ಹೋಗುವಾಗ ‘ನನಗೆ ಸಿಕ್ಕಿದೆ’ ಎಂದು ಕಣ್ಣೀರಿನಲ್ಲಿ ಹೇಳುತ್ತಾಳೆ’ ಎಂದು ಬರೆದುಕೊಂಡಿದ್ದಾರೆ. ಆದರೆ ಇನ್‌ಸ್ಟಾಗ್ರಾಂನಲ್ಲಿ ನಯನತಾರಾ ತಮ್ಮ ಪತಿಯೊಂದಿಗೆ ಇರುವ ಚಿತ್ರಗಳನ್ನು ಹಾಗೆಯ ಉಳಿಸಿಕೊಂಡಿದ್ದು ತಮ್ಮ ಪತಿಯನ್ನು ಅನ್‌ಫಾಲೋ ಮಾಡಿದ ಉದ್ದೇಶವನ್ನು ಬಿಟ್ಟುಕೊಡದೆ ತಮ್ಮ ಅಭಿವಮಾನಿಗಳಿಗೆ ಕುತೂಹಲ ಮೂಡಿಸಿದ್ದಾರೆ.
ಅನೇಕ ಹಿಟ್ ತಮಿಳು ಸಿನಿಮಾಗಳಲ್ಲಿ ನಟಿಸಿರುವ ನಯನತಾರಾ, ಶಾರುಖ್ ಖಾನ್ ಅವರ ಜವಾನ್ ಚಿತ್ರದ ಮೂಲಕ ಇತ್ತೀಚೆಗಷ್ಟೇ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು.