ಪ್ರಧಾನಿ ನರೇಂದ್ರ ಮೋದಿ ಹ್ಯಾಟ್ರಿಕ್‌ ! ಸಮೀಕ್ಷೆಗಳ ಉತ್ತರ

| Published : Jun 02 2024, 01:46 AM IST / Updated: Jun 02 2024, 04:39 AM IST

PM Modi at Vivekananda Rock Memorial
ಪ್ರಧಾನಿ ನರೇಂದ್ರ ಮೋದಿ ಹ್ಯಾಟ್ರಿಕ್‌ ! ಸಮೀಕ್ಷೆಗಳ ಉತ್ತರ
Share this Article
  • FB
  • TW
  • Linkdin
  • Email

ಸಾರಾಂಶ

 ‘ಸತತ 3ನೇ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಕೂಟಗಳು ಗೆಲುವು ಕಾಣಲಿವೆ. ಈ ಮೂಲಕ ಕೇಂದ್ರದಲ್ಲಿ ಹ್ಯಾಟ್ರಿಕ್‌ ಅವಧಿಗೆ ಎನ್‌ಡಿಎ ಸರ್ಕಾರ ಪ್ರತಿಷ್ಠಾಪಿತವಾಗಲಿದೆ’ ಎಂದು ಬಹುತೇಕ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ನವದೆಹಲಿ: ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಗುಜರಾತ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ಥಾನದಂಥ ತನ್ನ ಸಾಂಪ್ರದಾಯಿಕ ರಾಜ್ಯಗಳಲ್ಲಿ ಬಿಜೆಪಿ ಬಹುತೇಕ ಎಲ್ಲ ಸೀಟುಗಳಲ್ಲಿ ಕಳೆದ ಸಲದಂತೆ ಜಯಿಸಲಿದೆ. 

ಇದಕ್ಕೆ ಹೆಚ್ಚುವರಿಯಾಗಿ ಪ.ಬಂಗಾಳ, ಒಡಿಶಾ, ಆಂಧ್ರಪ್ರದೇಶದಂಥ ತನಗೆ ಅಷ್ಟಾಗಿ ನೆಲೆ ಇಲ್ಲದ ರಾಜ್ಯಗಳಲ್ಲೂ ಬಿಜೆಪಿ (ಎನ್‌ಡಿಎ) ಸ್ವಂತ ಬಲದಿಂದ ಹಾಗೂ ಟಿಡಿಪಿಯಂಥ ಮಿತ್ರರ ಬಲದಿಂದ ಉತ್ತಮ ಸ್ಥಾನ ಸಂಪಾದಿಸಲಿದೆ. ತಮಿಳುನಾಡು, ಕೇರಳದಂಥ ರಾಜ್ಯಗಳಲ್ಲೂ ಖಾತೆ ಆರಂಭಿಸಲಿದೆ. ಈ ಮೂಲಕ ತನ್ನ 400ರ ಗುರಿಯ ಸನಿಹ ತಲುಪಲಿದೆ ಎಂದು ಸಮೀಕ್ಷೆಗಳು ಹೇಳಿವೆ.ಆದರೆ ಇದಕ್ಕೆ ವಿರುದ್ಧವಾಗಿ ಬಹುತೇಕ ಎಲ್ಲ ವಿಪಕ್ಷಗಳು ಒಂದಾಗಿ, ಇಂಡಿಯಾ ಹೆಸರಿನ ಮೈತ್ರಿಕೂಟ ರಚಿಸಿಕೊಂಡು ಹೋರಾಡಿದರೂ ಅವುಗಳ ಸಂಖ್ಯೆ 150 ಕೂಡ ದಾಟದು ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. 

ಈ ಎರಡೂ ಕೂಟಗಳ ಹೊರತಾದ ಇತರ ಪಕ್ಷಗಳ ಸಾಧನೆ ಕಳೆದ ಸಲಕ್ಕಿಂತ ಭಾರಿ ಪ್ರಮಾಣದಲ್ಲಿ ಕುಸಿಯಲಿದೆ ಎಂದು ಸಮೀಕ್ಷಾ ಸಂಸ್ಥೆಗಳು ಹೇಳಿವೆ.

ಪೋಲ್‌ ಆಫ್ ಪೋಲ್ಸ್‌ಕೂಟ....ಸ್ಥಾನ..2019 ಎನ್‌ಡಿಎ...361..353 ಇಂಡಿಯಾ...145..91 ಇತರರು...37....99 ಚುನಾವಣೆ ನಡೆದಿದ್ದು 543... ಬಹುಮತಕ್ಕೆ 272 ಸಮೀಕ್ಷಾ ಸಂಸ್ಥೆಎನ್‌ಡಿಎ ಯುಪಿಎ ಇತರರು

ರಿ ಪಬ್ಲಿಕ್‌ ಟೀವಿ-ಪಿ ಮಾರ್ಕ್‌359 154 30 ರಿಪಬ್ಲಿಕ್‌ ಟೀವಿ-

ಮ್ಯಾಟ್ರೀಜ್353-368 118 - 133 43-48

ಜನ್‌ ಕೀ ಬಾತ್‌362-392 141-161 10-20 

ದೈನಿಕ್‌ ಭಾಸ್ಕರ್‌281-350  145  -  201  33-49 

ಇಂಡಿಯಾ ನ್ಯೂಸ್‌-ಡೈನಾಮಿಕ್ಸ್‌  371  125  47

ಇಂಡಿಯಾ ಟೀವಿ-ಸಿಎನ್‌ಎಕ್ಸ್  371-  401  109-139  28-38  

ನ್ಯೂಸ್‌ ನೇಶನ್‌  342 - 378 153 -169  21-23

ನ್ಯೂಸ್-183  55-370  125-140  42-52

ಇಂಡಿಯಾ ಟುಡೇ-ಮೈ ಎಕ್ಸಿಸ್‌216-241106-1316-15

ಎಬಿಪಿ ನ್ಯೂಸ್‌-ಸಿ ವೋಟರ್‌278-330 126-174 4-12