ಸಾರಾಂಶ
ನರೇಂದ್ರ ಮೋದಿ ಸರ್ಕಾರಕ್ಕೆ ಅಲ್ಪ ಬಹುಮತ ಬಂದಿರುವ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಭಾರತದ ಅಭಿವೃದ್ಧಿಗೆ ಹಾದಿ ಕಷ್ಟಕರವಾಗಲಿದೆ ಎಂದು ರೇಟಿಂಗ್ ಏಜೆನ್ಸಿಗಳು ತಿಳಿಸಿವೆ.
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಲ್ಪಮತಕ್ಕೆ ಕುಸಿದಿರುವುದು ಆರ್ಥಿಕ ಸುಧಾರಣೆ ಕ್ರಮಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ ಎಂದು ರೇಟಿಂಗ್ ಏಜೆನ್ಸಿಗಳು ಹೇಳಿವೆ.
ಅಲ್ಪಮತಗಳಿಂದಾಗಿ ಬಿಜೆಪಿಗೆ ತನ್ನ ಮೈತ್ರಿಪಕ್ಷಗಳ ಮೇಲೆ ಹೆಚ್ಚು ಅವಲಂಬನೆಯಾಗಬೇಕಾಗುತ್ತದೆ.ಹೀಗಾಗಿ ತನ್ನ ಸ್ವಂತ ನಿರ್ಧಾರಗಳನ್ನು ಬದಿಗೊತ್ತಿ, ಮಿತ್ರಪಕ್ಷಗಳ ಒಳಿತಿಗೆ ಕೆಲಸ ಮಾಡಬೇಕಾಗುತ್ತದೆ.
ಇದರಿಂದಾಗಿ ಹಿಂದಿನ ಅವಧಿಯ ಆರ್ಥಿಕ ಸುಧಾರಣ ನೀತಿಗಳ ಅನುಷ್ಠಾನ ಮುಳ್ಳಿನ ಹಾದಿಗೆ ಬರಲಿದೆ ಎಂದು ಮೂಡೀಸ್ ರೇಟಿಂಗ್ ಹಾಗೂ ಫಿಟ್ಚ್ ರೇಟಿಂಗ್ ಸಂಸ್ಥೆಗಳು ಹೇಳಿವೆ.ಈ ಸರ್ಕಾರದ ಅವಧಿಯಲ್ಲಿಯೂ ಜಿಡಿಪಿ ಸೇರಿದಂತೆ ವಿವಿಧ ಆರ್ಥಿಕ ಬೆಳವಣಿಗೆಗಳ ನಿರೀಕ್ಷೆಗಳು ಕುಂಠಿತವಾಗುವ ಸಾಧ್ಯತೆಗಳಿವೆ ಎಂದು ಅವು ಹೇಳಿವೆ.
;Resize=(128,128))
;Resize=(128,128))