ಮಲಪ್ಪುರಂ ಜಿಲ್ಲೆಯಲ್ಲಿ ಸ್ಫೋಟ ಸದ್ದು: 287 ಗ್ರಾಮಸ್ಥರ ಸ್ಥಳಾಂತರ

| Published : Oct 31 2024, 12:49 AM IST

ಮಲಪ್ಪುರಂ ಜಿಲ್ಲೆಯಲ್ಲಿ ಸ್ಫೋಟ ಸದ್ದು: 287 ಗ್ರಾಮಸ್ಥರ ಸ್ಥಳಾಂತರ
Share this Article
  • FB
  • TW
  • Linkdin
  • Email

ಸಾರಾಂಶ

250ಕ್ಕೂ ಹೆಚ್ಚು ಜನರನ್ನು ಬಲಿಪಡೆದ ವಯನಾಡು ಭೂಕುಸಿತ ಕರಾಳ ನೆನಪು ಮಾಸುವ ಮುನ್ನವೇ ಕೇರಳದ ಮಲಪ್ಪುರಂ ಜಿಲ್ಲೆಯ ಅನಕಲ್‌ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಸ್ಫೋಟದಂತಹ ಶಬ್ದ ಕೇಳಿಸಿದ್ದು, ಜನ ಬೆಚ್ಚಿಬಿದ್ದಾರೆ.

ಮಲಪ್ಪುರಂ: 250ಕ್ಕೂ ಹೆಚ್ಚು ಜನರನ್ನು ಬಲಿಪಡೆದ ವಯನಾಡು ಭೂಕುಸಿತ ಕರಾಳ ನೆನಪು ಮಾಸುವ ಮುನ್ನವೇ ಕೇರಳದ ಮಲಪ್ಪುರಂ ಜಿಲ್ಲೆಯ ಅನಕಲ್‌ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಸ್ಫೋಟದಂತಹ ಶಬ್ದ ಕೇಳಿಸಿದ್ದು, ಜನ ಬೆಚ್ಚಿಬಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 287 ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಮಂಗಳವಾರ ರಾತ್ರಿ 9.15ಕ್ಕೆ ಮೊದಲ ಸಲ ಸ್ಫೋಟದಂತಹ ಶಬ್ದ ಸ್ಥಳೀಯರಿಗೆ ಕೇಳಿಸಿದೆ. ಆ ಬಳಿಕ ಮತ್ತೆ ಎರಡು ಬಾರಿ ಲಘು ಕಂಪನದ ಅನುಭವ ಆಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಭೀತಿ ಮೂಡಿಸಿತ್ತು. ಸುಮಾರು ಎರಡು ಕಿ.ಮೀ ವ್ಯಾಪ್ತಿಯ ಜನರಿಗೆ ಈ ಅನುಭವ ಆಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಮಂಗಳವಾರ ರಾತ್ರಿ 85 ಕುಟುಂಬಗಳ 287 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘10 ದಿನಗಳ ಹಿಂದೆಯೂ ಈ ರೀತಿಯ ಶಬ್ದ ಕೇಳಿ ಬಂದಿತ್ತು. ಗ್ರಾನೈಟ್‌ ಕ್ವಾರಿಗಳಲ್ಲಿ ಕೇಳಿ ಬರುವ ಶಬ್ದದ ರೀತಿಯೇ ಶಬ್ದಗಳು ಕೇಳಿಸಿವೆ. ಮನೆಗಳು ಬಿರುಕು ಕಂಡು ಬಂದಿವೆ’ ಎಂದು ಸ್ಥಳೀಯರು ಹೇಳಿದ್ದಾರೆ.