ನೀಟ್ ಅಕ್ರಮ: ದಿಲ್ಲೀಲಿ ವಿದ್ಯಾರ್ಥಿಗಳಿಂದ ‘ಸಂಸತ್‌ ಚಲೋ’

| Published : Jul 03 2024, 12:21 AM IST

ನೀಟ್ ಅಕ್ರಮ: ದಿಲ್ಲೀಲಿ ವಿದ್ಯಾರ್ಥಿಗಳಿಂದ ‘ಸಂಸತ್‌ ಚಲೋ’
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ ಅಕ್ರಮವನ್ನು ಖಂಡಿಸಿ, ಎನ್‌ಟಿಎವನ್ನು ರದ್ದುಗೊಳಿಸುವಂತೆ ಕೋರಿ ನೂರಾರು ವಿದ್ಯಾರ್ಥಿಗಳು ಮಂಗಳವಾರ ದೆಹಲಿಯಲ್ಲಿ ಸಂಸತ್‌ ಚಲೋ ಪ್ರತಿಭಟನೆ ನಡೆಸಿದರು.

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ ಅಕ್ರಮವನ್ನು ಖಂಡಿಸಿ, ಎನ್‌ಟಿಎವನ್ನು ರದ್ದುಗೊಳಿಸುವಂತೆ ಕೋರಿ ನೂರಾರು ವಿದ್ಯಾರ್ಥಿಗಳು ಮಂಗಳವಾರ ದೆಹಲಿಯಲ್ಲಿ ಸಂಸತ್‌ ಚಲೋ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

ಪ್ರತಿಭಟನೆ ವೇಳೆ ‘ಎನ್‌ಟಿಎ ರದ್ದುಗೊಳಿಸಿ’,‘ಕೇಂದ್ರ ಶಿಕ್ಷಣ ಸಚಿವರನ್ನು ಎತ್ತಂಗಡಿ’ ಮಾಡಿ ಎಂದು ಭಿತ್ತಿಪತ್ರಗಳನ್ನು ಹಿಡಿದು ದೆಹಲಿಯ ಪಟೇಲ್‌ ಚೌಕ್‌ ಮೆಟ್ರೋ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಜೊತೆಗೆ ಇನ್ನು ಕೆಲವರು ಸಂಸತ್‌ಗೆ ಮುತ್ತಿಗೆ ಹಾಕಲು ಯುತ್ನಿಸಿದರು. ಆದರೆ ಪೊಲೀಸರು ಈ ಯತ್ನವನ್ನು ಭಗ್ನಗೊಳಿಸಿದರು.

ಮತ್ತೊಂದೆಡೆ ಜಂತರ್‌ ಮಂತರ್‌ನಲ್ಲಿ ಇಂಡಿಯಾ ಕೂಟ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳು ಹಾಗೂ ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆಗಳು ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದರು.

ಜೊತೆಗೆ ಬುಧವಾರವೂ ಸಂಸತ್‌ ಮುತ್ತಿಗೆಗೆ ಕರೆ ನೀಡಿದರು.