ಚೀನಾ ಸಾಲದ ಸುಳಿಯಲ್ಲಿ ಈಗ ನೇಪಾಳ : ಪೋಖಾರಾದಲ್ಲಿ ಚೀನಾದಿಂದ 1800 ಕೋಟಿ ರು. ವೆಚ್ಚದಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

| Published : Aug 25 2024, 01:48 AM IST / Updated: Aug 25 2024, 05:04 AM IST

ಚೀನಾ ಸಾಲದ ಸುಳಿಯಲ್ಲಿ ಈಗ ನೇಪಾಳ : ಪೋಖಾರಾದಲ್ಲಿ ಚೀನಾದಿಂದ 1800 ಕೋಟಿ ರು. ವೆಚ್ಚದಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಲಂಕಾ, ಪಾಕಿಸ್ತಾನ ಬಳಿಕ ಈಗ ನೇಪಾಳ ಕೂಡ ಚೀನಾದ ಸಾಲದ ಸುಳಿಯಲ್ಲಿ ಸಿಲುಕಿದೆ. ನೇಪಾಳದ ಪೋಖಾರಾದಲ್ಲಿ ಚೀನಾ 1800 ಕೋಟಿ ರು. ವೆಚ್ಚದಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿಕೊಟ್ಟಿದೆ.

ಕಾಠ್ಮಂಡು: ಶ್ರೀಲಂಕಾ, ಪಾಕಿಸ್ತಾನ ಬಳಿಕ ಈಗ ನೇಪಾಳ ಕೂಡ ಚೀನಾದ ಸಾಲದ ಸುಳಿಯಲ್ಲಿ ಸಿಲುಕಿದೆ. ನೇಪಾಳದ ಪೋಖಾರಾದಲ್ಲಿ ಚೀನಾ 1800 ಕೋಟಿ ರು. ವೆಚ್ಚದಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿಕೊಟ್ಟಿದೆ. ಆದರೆ ಕಳಪೆ ಕಾಮಗಾರಿ ಹಾಗೂ ಪ್ರಯಾಣಿಕರ ಕೊರತೆಯಿಂದಾಗಿ ಸಾಲ ತೀರಿಸಲು ನೇಪಾಳಕ್ಕೆ ಆಗುತ್ತಿಲ್ಲ. ಹೀಗಾಗಿ ಸಾಲವನ್ನು ಅನುದಾನವಾಗಿ ಪರಿವರ್ತಿಸಿ ಮನ್ನಾ ಮಾಡುವಂತೆ 1 ತಿಂಗಳ ಹಿಂದಷ್ಟೇ ಅಧಿಕಾರಕ್ಕೆ ಬಂದಿರುವ ನೇಪಾಳ ಸರ್ಕಾರ ಮನವಿ ಮಾಡಿದೆ.

ಚೀನಾ ನಿರ್ಮಿಸಿಕೊಟ್ಟಿರುವ ಈ ವಿಮಾನ ನಿಲ್ದಾಣ ಕಳಪೆ ಕಾಮಗಾರಿಯಿಂದ ಕೂಡಿದೆ. ಅಲ್ಲದೆ ವೆಚ್ಚವನ್ನು ಬೇಕಂತಲೇ ಹೆಚ್ಚು ತೋರಿಸಿದೆ. ಹಿಂದೆ ಹಲವು ದೇಶಗಳಿಗೆ ಚೀನಾ ಇದೇ ರೀತಿ ವಂಚನೆ ಮಾಡಿತ್ತು. ಅದನ್ನು ನೇಪಾಳದಲ್ಲೂ ಮುಂದುವರಿಸಿದೆ ಎಂದು ಅಮೆರಿಕ ಮೂಲದ ಪತ್ರಿಕೆಯೊಂದು ವರದಿ ಮಾಡಿದೆ.ಹೊಸ ವಿಮಾನ ನಿಲ್ದಾಣ ಉದ್ಘಾಟನೆಯಾದ ಒಂದೇ ವಾರಕ್ಕೆ 2023ರ ಜನವರಿಯಲ್ಲಿ ನಿಲ್ದಾಣದತ್ತ ಬರುತ್ತಿದ್ದ ವಿಮಾನವೊಂದು ಅಪಘಾತಕ್ಕೀಡಾಗಿ 72 ಮಂದಿ ಸಾವಿಗೀಡಾಗಿದ್ದರು. ಅಂತಾರಾಷ್ಟ್ರೀಯ ವಿಮಾನಗಳು ಈ ಏರ್‌ಪೋರ್ಟ್‌ನತ್ತ ಬರಲಿಲ್ಲ. ಇದರಿಂದಾಗಿ ಹೊಸ ವಿಮಾನ ನಿಲ್ದಾಣ ಯೋಜನೆ ನೇಪಾಳ ಸರ್ಕಾರಕ್ಕೆ ಬಿಳಿಯಾನೆಯಂತಾಗಿದೆ.

ಈ ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಅಕ್ರಮವಾಗಿದೆ ಎಂಬ ಬಗ್ಗೆ ನೇಪಾಳದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಕೂಡ ತನಿಖೆ ಆರಂಭಿಸಿತ್ತು. ಅಲ್ಲದೆ ನೇಪಾಳ ಸಂಸದೀಯ ಸ್ಥಾಯಿ ಸಮಿತಿ ವಿಮಾನ ನಿಲ್ದಾಣದ ಕಳಪೆ ಕಾಮಗಾರಿ ಬಗ್ಗೆ ವಿಚಾರಣೆ ಆರಂಭಿಸಿತ್ತು.

ಭಾರತದ ನೆರೆ ದೇಶವಾಗಿರುವ ನೇಪಾಳದ ಜತೆಗೆ ಉತ್ತಮ ಸಂಬಂಧ ಹೊಂದುವ ಸಲುವಾಗಿ ಚೀನಾ ಈ ಏರ್‌ಪೋರ್ಟ್‌ ಸಾಲವನ್ನು ಮನ್ನಾ ಮಾಡಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.