ಸಾರಾಂಶ
ದೇಶದಲ್ಲಿ ಸೋಮವಾರ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಶೂನ್ಯ ಸಾವು ಸಂಭವಿಸಿ ನಿಟ್ಟುಸಿರು ಬಿಡುವಮತೆ ಮಾಡಿದೆ.
ನವದೆಹಲಿ: ದೇಶದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು ಕಳೆದ 24 ಗಂಟೆಗಳಲ್ಲಿ 272 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 2,990 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ. ಯಾವುದೇ ಸಾವು ಸಂಭವಿಸಿಲ್ಲ.ಕಳೆದ ವರ್ಷ ಡಿ.5ರ ವರೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಎರಡಂಕಿ ಇತ್ತು.
ನೂತನ ಕೋವಿಡ್ ತಳಿ ಜೆಎನ್.1 ಪತ್ತೆ ನಂತರ ಕೋವಿಡ್ ಪ್ರಕರಣಗಳು ಏರುಮುಖವಾದವು.ಕಳೆದ ವರ್ಷ ಡಿ.31 ರಂದು ಒಂದೇ ದಿನ 841 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು.