3ರಿಂದ 6ನೇ ತರಗತಿ ಸಿಬಿಎಸ್ಸಿ ಪಠ್ಯ ಬದಲು: ಈ ಸಲವೇ ಜಾರಿ

| Published : Mar 24 2024, 01:37 AM IST / Updated: Mar 24 2024, 01:17 PM IST

ಸಾರಾಂಶ

2024-25ನೇ ಸಾಲಿನಿಂದ 3ರಿಂದ 6ನೇ ತರಗತಿವರೆಗಿನ ಸಿಬಿಎಸ್‌ಇ ಪಠ್ಯಕ್ರಮ ಬದಲಾಗಲಿದೆ. ಶೀಘ್ರದಲ್ಲೇ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಯು (ಎನ್‌ಸಿಇಆರ್‌ಟಿ) ಈ ಪಠ್ಯ ಬಿಡುಗಡೆ ಮಾಡಲಿದೆ

ನವದೆಹಲಿ: 2024-25ನೇ ಸಾಲಿನಿಂದ 3ರಿಂದ 6ನೇ ತರಗತಿವರೆಗಿನ ಸಿಬಿಎಸ್‌ಇ ಪಠ್ಯಕ್ರಮ ಬದಲಾಗಲಿದೆ. ಶೀಘ್ರದಲ್ಲೇ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಯು (ಎನ್‌ಸಿಇಆರ್‌ಟಿ) ಈ ಪಠ್ಯ ಬಿಡುಗಡೆ ಮಾಡಲಿದೆ ಎಂದು ಶನಿವಾರ ಸಿಬಿಎಸ್ಇ ಅಧಿಕಾರಿಗಳು ಹೇಳಿದ್ದಾರೆ. 

ಆದರೆ ಈ 4 ತರಗತಿಗಳನ್ನು ಹೊರತುಪಡಿಸಿದರೆ ಮಿಕ್ಕ ಯಾವ ತರಗತಿಗಳಿಗೂ ಪಠ್ಯಕ್ರಮದಲ್ಲಿ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಬದಲಾದ ಪಠ್ಯಕ್ಕೆ ಹೊಂದಿಕೊಳ್ಳಲು 3ರಿಂದ 6ನೇ ಕ್ಲಾಸಿನವರೆಗೆ ಬ್ರಿಜ್‌ ಕೋರ್ಸುಗಳನ್ನು ಹಮ್ಮಿಕೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.