ಸಾರಾಂಶ
ನೀಟ್-ಪಿಜಿ ಪರೀಕ್ಷೆಯ ಹೊಸ ದಿನಾಂಕ ಪ್ರಕಟವಾಗಿದೆ. 2024ನೇ ವೈದ್ಯಕೀಯ ವಿಜ್ಞಾನ ಪ್ರವೇಶಾತಿ ಪರೀಕ್ಷೆಯು ಆಗಸ್ಟ್ 11ಕ್ಕೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ ತಿಳಿಸಿದೆ.
ನವದೆಹಲಿ: ನೀಟ್-ಪಿಜಿ ಪರೀಕ್ಷೆಯ ಹೊಸ ದಿನಾಂಕ ಪ್ರಕಟವಾಗಿದೆ. 2024ನೇ ವೈದ್ಯಕೀಯ ವಿಜ್ಞಾನ ಪ್ರವೇಶಾತಿ ಪರೀಕ್ಷೆಯು ಆಗಸ್ಟ್ 11ಕ್ಕೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ ತಿಳಿಸಿದೆ.
ಈ ಹಿಂದೆ ನೀಟ್ ಯುಜಿ ಪ್ರವೇಶ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಮಧ್ಯೆ ಪಿಜಿ ಪರೀಕ್ಷೆ ಜೂ.23ರ ಬೆಳಗ್ಗೆ ನಡೆಯಬೇಕಿತ್ತು. ಆದರೆ ಜೂ.22ರ ರಾತ್ರಿ ಏಕಾಏಕಿ ಪರೀಕ್ಷೆ ರದ್ದು ಮಾಡಲಾಗಿತ್ತು. ‘ಮುನ್ನೆಚ್ಚರಿಕೆಯ ಕ್ರಮವಾಗಿ ಪರೀಕ್ಷೆಯನ್ನು ಮಂದೂಡಲಾಗಿದೆ’ ಎಂದು ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಟಿಎ) ಹೇಳಿತ್ತು. ಇದು ಪರೀಕ್ಷಾರ್ಥಿಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಈಗ ಆ.11ಕ್ಕೆ ಎರಡು ಪಾಳಿಯಲ್ಲಿ ಈ ಪರೀಕ್ಷೆ ನಡೆಯಲಿದೆ ಎಂದು ಎನ್‌ಟಿಎ ಹೇಳಿದೆ.
ಇದೇ ವೇಳೆ ನೀಟ್ - ಪಿಜಿ ಅರ್ಹತೆಗಾಗಿ ಕಟ್ ಆಫ್ ದಿನಾಂಕವನ್ನು ಆ.15ರ ತನಕ ಮುಂದುವರೆಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ ಹೇಳಿದೆ.