ಜಸ ಸಾಮಾನ್ಯರೂ ಅರ್ಥ ಮಾಡಿಕೊಳ್ಳುವ ರಳ ಭಾಷೆಯ ನೂತನ ಆದಾಯ ತೆರಿಗೆ ಕರಡು ಮಸೂದೆಗೆ ಇಂದು ಸಂಪುಟ ಅನುಮೋದನೆ?

| N/A | Published : Feb 07 2025, 02:03 AM IST / Updated: Feb 07 2025, 05:21 AM IST

ಸಾರಾಂಶ

 ಆದಾಯ ತೆರಿಗೆ ಮಾಹಿತಿಯನ್ನು ಜಸ ಸಾಮಾನ್ಯರೂ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಎಂದು ಹೇಳಲಾದ ನೂತನ ಆದಾಯ ತೆರಿಗೆ ಕರಡು ಮಸೂದೆ (ನೇರ ತೆರಿಗೆ ) ಶುಕ್ರವಾರ ಕೇಂದ್ರ ಸಚಿವ ಸಂಪುಟದಲ್ಲಿ ಮಂಡನೆಯಾಗಲಿದೆ

ನವದೆಹಲಿ: ಆದಾಯ ತೆರಿಗೆ ಮಾಹಿತಿಯನ್ನು ಜಸ ಸಾಮಾನ್ಯರೂ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಎಂದು ಹೇಳಲಾದ ನೂತನ ಆದಾಯ ತೆರಿಗೆ ಕರಡು ಮಸೂದೆ (ನೇರ ತೆರಿಗೆ ) ಶುಕ್ರವಾರ ಕೇಂದ್ರ ಸಚಿವ ಸಂಪುಟದಲ್ಲಿ ಮಂಡನೆಯಾಗಲಿದೆ. ಈ ಕರಡು ಮಸೂದೆಗೆ ಸಂಪುಟ ಶುಕ್ರವಾರವೇ ಅನುಮೋದನೆ ನೀಡಿ, ಅದನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎನ್ನಲಾಗಿದೆ.

6 ದಶಕಗಳ ಹಿಂದಿನ ಆದಾಯ ತೆರಿಗೆಯನ್ನು ಮತ್ತಷ್ಟು ಜನ ಸ್ನೇಹಿ, ಸರಳವಾಗಿ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ರೂಪಿಸಲಾಗಿದೆ. ಹೊಸ ಆದಾಯ ತೆರಿಗೆಯು ಉದ್ದನೆಯ ವಾಕ್ಯಗಳನ್ನು ಹೊಂದಿರುವುದಿಲ್ಲ, ನಿಬಂಧನೆಗಳನ್ನು ಒಳಗೊಂಡಿರುವುದಿಲ್ಲ ಮತ್ತು ವಿವರಣೆಗಳನ್ನು ಒಳಗೊಂಡಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕರಡು ತೆರಿಗೆ ಮಸೂದೆಯು ಯಾವುದೇ ಹೊಸ ತೆರಿಗೆಗಳನ್ನು ಒಳಗೊಂಡಿರುವುದಿಲ್ಲ. ಬದಲಾಗಿ ಇರುವ ತೆರಿಗೆ ಪದ್ಧತಿಯನ್ನೇ ಸರಳಗೊಳಿಸುವ, ಪಾವತಿದಾರರಿಗೆ ಪಾಲನೆ ಮಾಡಲು ಅನುಕೂಲ ಮಾಡಿಕೊಡುವ ಉದ್ದೇಶ ಮಾತ್ರ ಹೊಂದಿರಲಿದೆ.

ಜೊತೆಗೆ ಹಳೆಯ ತೆರಿಗೆ ಪದ್ಧತಿಗಳಿಂದ ಸೃಷ್ಟಿಯಾಗುತ್ತಿದ್ದ ಕಾನೂನು ವ್ಯಾಜ್ಯಗಳನ್ನು ಕಡಿಮೆ ಮಾಡಲು ಕೆಲವೊಂದು ತಿದ್ದುಪಡಿ ತರುವ, ಕೆಲವೊಂದು ತಪ್ಪುಗಳಿಗೆ ಶಿಕ್ಷೆ, ದಂಡದ ಪ್ರಮಾಣ ಕಡಿತ ಮಾಡುವ ಸಾಧ್ಯತೆಯೂ ಇದೆ.