ಸಾರಾಂಶ
ಬಹುನಿರೀಕ್ಷಿತ ಲೋಕಸಭೆ ಚುನಾವಣೆಗೆ ಮುನ್ನ ತಾವು ಬಿಜೆಪಿ ಸೇರುವುದಾಗಿ ಹಬ್ಬಿರುವ ಸುದ್ದಿ ಸಂಪುರ್ಣ ಸುಳ್ಳು ಎಂದು ನಟ ಪ್ರಕಾಶ್ ರಾಜ್ ಗುರುವಾರ ಸ್ಪಷ್ಟಪಡಿಸಿದ್ದಾರೆ
ಹೈದರಾಬಾದ್: ಬಹುನಿರೀಕ್ಷಿತ ಲೋಕಸಭೆ ಚುನಾವಣೆಗೆ ಮುನ್ನ ತಾವು ಬಿಜೆಪಿ ಸೇರುವುದಾಗಿ ಹಬ್ಬಿರುವ ಸುದ್ದಿ ಸಂಪುರ್ಣ ಸುಳ್ಳು ಎಂದು ನಟ ಪ್ರಕಾಶ್ ರಾಜ್ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಪ್ರಕಾಶ್ ಗುರುವಾರ ಮಧ್ಯಾಹ್ನ ಬಿಜೆಪಿ ಸೇರುತ್ತಾರೆ ಎಂದು ‘ದ ಸ್ಕಿನ್ ಡಾಕ್ಟರ್’ ಎಂಬ ಟ್ವೀಟರ್ ಖಾತೆಯಲ್ಲಿ ಹೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ನಟ, ‘ನನ್ನನ್ನು ಖರೀದಿಸುವಷ್ಟು (ಸೈದ್ಧಾಂತಿಕವಾಗಿ) ಅವರು ಶ್ರೀಮಂತರಲ್ಲ ಎಂದು ಅವರು ಅರಿತುಕೊಂಡಿರಬೇಕು ಎಂದು ನಾನು ಭಾವಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.