ಸಾರಾಂಶ
ನೈಜೀರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ ಸರ್ಕಾರ ತನ್ನ ದೇಶದ 2ನೇ ಅತ್ಯುತ್ತಮ ನಾಗರಿಕ ಪ್ರಶಸ್ತಿ ‘ದಿ ಗ್ರಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಗರ್’ ಪ್ರಶಸ್ತಿ ನೀಡಿ ಗೌರವಿಸಿದೆ.
ಅಬುಜಾ: ನೈಜೀರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ ಸರ್ಕಾರ ತನ್ನ ದೇಶದ 2ನೇ ಅತ್ಯುತ್ತಮ ನಾಗರಿಕ ಪ್ರಶಸ್ತಿ ‘ದಿ ಗ್ರಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಗರ್’ ಪ್ರಶಸ್ತಿ ನೀಡಿ ಗೌರವಿಸಿದೆ.
ಮೂರು ದೇಶಗಳ ಪ್ರವಾಸ ಕೈಗೊಂಡಿರುವ ಮೋದಿ ಮೊದಲ ಭಾಗವಾಗಿ ನೈಜಿರಿಯಾ ಪ್ರಧಾನಿ ಬೋಲಾ ಅಹ್ಮದ್ ಟಿನುಬು ಆಹ್ಮಾನದ ಮೇರೆಗೆ ನೈಜೀರಿಯಾಗೆ ಬಂದಿದ್ದಾರೆ. 17 ವರ್ಷದ ಬಳಿಕ ಭಾರತದ ಪ್ರಧಾನಿಯೊಬ್ಬರು ನೈಜೀರಿಯಾ ಪ್ರವಾಸ ಕೈಗೊಂಡಿದ್ದು, ಅಲ್ಲಿನ ಸರ್ಕಾರ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ.
ಇದಕ್ಕೆ ಕೃತಜ್ಞತೆ ಸಲ್ಲಿಸಿದ ಮೋದಿ, ‘ಇದು 140 ಕೋಟಿ ಭಾರತೀಯರಿಗೆ ಸಂದ ಗೌರವ’ ಎಂದಿದ್ದಾರೆ.
ಈ ಹಿಂದೆ 1969ರಲ್ಲಿ ರಾಣಿ ಎಲಿಜಬೆತ್‌ಗೆ ಗೌರವ ದೊರೆತಿತ್ತು. ಅದಾದ ಬಳಿಕ ಈ ಪ್ರಶಸ್ತಿ ಪಡೆದ 2ನೇ ವಿದೇಶಿ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಇದು ಪ್ರಧಾನಿಗೆ ದೊರೆತಿರುವ 17ನೇ ಅಂತರಾಷ್ಟ್ರೀಯ ಪ್ರಶಸ್ತಿ.