ಸತತ 6ನೇ ಬಾರಿ ಬಜೆಟ್‌ ಮಂಡಿಸಿ ಮೊರಾರ್ಜಿ ದಾಖಲೆ ಸರಿಗಟ್ಟಲು ನಿರ್ಮಲಾ ಸಜ್ಜು

| Published : Jan 27 2024, 01:23 AM IST / Updated: Jan 27 2024, 07:35 AM IST

Nirmala Seetharaman
ಸತತ 6ನೇ ಬಾರಿ ಬಜೆಟ್‌ ಮಂಡಿಸಿ ಮೊರಾರ್ಜಿ ದಾಖಲೆ ಸರಿಗಟ್ಟಲು ನಿರ್ಮಲಾ ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ನಿರ್ಮಲಾ ಸೀತಾರಾಮನ್‌ ಅವರು ಸತತ 6ನೇ ಬಾರಿ ಬಜೆಟ್‌ ಮಂಡಿಸುವ ಮೂಲಕ ಮೊರಾರ್ಜಿ ದೇಸಾಯಿ ಅವರ ದಾಖಲೆ ಸರಿಗಟ್ಟಿದ ಮೊದಲ ಮಹಿಳಾ ಹಣಕಾಸು ಸಚಿವೆಯಾಗಲಿದ್ದಾರೆ.

ನವದೆಹಲಿ: ಸತತ 6ನೇ ಬಾರಿ ಆಯವ್ಯಯ ಮಂಡಿಸಿ ಮೊರಾರ್ಜಿ ದೇಸಾಯಿ ದಾಖಲೆ ಸರಿಗಟ್ಟಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಜ್ಜಾಗಿದ್ದಾರೆ. ಈಗಾಗಲೇ ಸತತ 5 ಪೂರ್ಣ ಬಜೆಟ್‌ ಮಂಡಿಸಿದ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವೆ ಎಂಬ ದಾಖಲೆ ನಿರ್ಮಲಾಗೆ ಸಂದಿದೆ.

ಮುಂಬರುವ ಫೆ.1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಧ್ಯಂತರ ಬಜೆಟ್‌ ಮಂಡಿಸಲಿದ್ದಾರೆ.

ಈ ಮೂಲಕ ಸತತ 6 ಬಜೆಟ್‌ ಮಂಡಿಸಿದ್ದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆ ಸರಿಗಟ್ಟಿದಂತಾಗಲಿದೆ.

ಮೊರಾರ್ಜಿ ದೇಸಾಯಿ 1959-64ರ ಅವಧಿಯಲ್ಲಿ ಸತತ 6 ಬಾರಿ ಬಜೆಟ್‌ ಮಂಡಿಸಿದ್ದರು.