ವಿತ್ತ ಸಚಿವೆ ಬಜೆಟ್‌ ವೇಳೆ ಅಂಕಿ ಅಂಶಗಳ ಮಂಡನೆ ಸಂದರ್ಭದಲ್ಲಿ ತೆಲುಗು, ತಮಿಳು ಕವಿತೆ ವಾಚನ

| N/A | Published : Feb 02 2025, 01:02 AM IST / Updated: Feb 02 2025, 04:48 AM IST

ಸಾರಾಂಶ

ವಿತ್ತ ಸಚಿವೆ ಬಜೆಟ್‌ ಮಂಡನೆ ವೇಳೆ ಅಂಕಿ ಅಂಶಗಳ ಮಂಡನೆ ಸಂದರ್ಭದಲ್ಲಿ ತೆಲುಗು, ತಮಿಳು ಕವಿತೆ ವಾಚನದ ಮೂಲಕ ಗಮನ ಸೆಳೆದರು.

ನವದೆಹಲಿ : ವಿತ್ತ ಸಚಿವೆ ಬಜೆಟ್‌ ಮಂಡನೆ ವೇಳೆ ಅಂಕಿ ಅಂಶಗಳ ಮಂಡನೆ ಸಂದರ್ಭದಲ್ಲಿ ತೆಲುಗು, ತಮಿಳು ಕವಿತೆ ವಾಚನದ ಮೂಲಕ ಗಮನ ಸೆಳೆದರು.

ವಿಕಸಿತ ಭಾರತದ ಕುರಿತು ಮಾತನಾಡುವ ಸಂದರ್ಭದಲ್ಲಿ ತೆಲುಗು ಕವಿ ಮತ್ತು ನಾಟಕಕಾರ ಗುರಜಡ ಅಪ್ಪಾ ರಾವ್ ಅವರ ಕವಿತೆ ವಾಚಿಸುತ್ತಾ ತಮ್ಮ ಮಾತುಗಳನ್ನು ಆರಂಭಿಸಿದರು. ಅಪ್ಪಾ ರಾವ್ ಅವರು ‘ ಒಂದು ದೇಶ ಕೇವಲ ಅದರ ಮಣ್ಣು ಅಲ್ಲ. ಒಂದು ಅಂದರೆ ಅದು ಜನರು‘ ಎಂದಿದ್ದಾರೆ. ಅದಕ್ಕೆ ಅನುಗುಣವಾಗಿ ನಮಗೆ ವಿಕಸಿತ ಭಾರತ ಇರಲಿದೆ ಎಂದರು.

ಗುರಜಡ ಅಪ್ಪಾ ರಾವ್ ತೆಲುಗಿನ ಕವಿ ಮತ್ತು ನಾಟಕಕಾರ. ಮೂಲತಃ ಆಂಧ್ರಪ್ರದೇಶದವರು. ಆಧುನಿಕ ತೆಲುಗು ನಾಟಕದ ಪ್ರವರ್ತಕ ಅಂತಲೇ ಖ್ಯಾತರಾಗಿದ್ದಾರೆ.

ಇನ್ನು ತೆರಿಗೆ ನೀತಿಗಳ ಬಗ್ಗೆ ಹೇಳುವ ಸಂದರ್ಭದಲ್ಲಿ ಸಚಿವೆ ತಿರುಕ್ಕುರಲ್ ಅವರ 542ನೇ ಸಾಲುಗಳನ್ನು ಓದಿ ಗಮನ ಸೆಳೆದರು. ‘ ಜೀವಿಗಳು ಮಳೆಯ ನಿರೀಕ್ಷೆಯಲ್ಲಿ ಬದುಕುವಂತೆ, ನಾಗರಿಕರು ಉತ್ತಮ ಆಡಳಿತದ ನಿರೀಕ್ಷೆಯಲ್ಲಿ ಬದುಕುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಜನರ ಅಗತ್ಯಗಳನ್ನ ಅರ್ಥ ಮಾಡಿಕೊಳ್ಳಲು ಮತ್ತು ಪರಿಹರಿಸಲು ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದರು.