ನಾಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿದ್ದಾರೆ ಸತತ 8ನೇ ದಾಖಲೆ ಬಜೆಟ್‌

| N/A | Published : Jan 31 2025, 01:32 AM IST / Updated: Jan 31 2025, 04:48 AM IST

ಸಾರಾಂಶ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆ.1ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 3ನೇ ಅವಧಿಯ ಎರಡನೇ ಬಜೆಟ್‌ ಮಂಡಿಸಲಿದ್ದಾರೆ. ಈ ಮೂಲಕ ಸೀತಾರಾಮನ್‌ ಅವರು ಸತತ 8ನೇ ಬಾರಿ ಬಜೆಟ್‌ ಮಂಡಿಸಿದ ದಾಖಲೆ ನಿರ್ಮಿಸಲಿದ್ದಾರೆ.

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆ.1ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 3ನೇ ಅವಧಿಯ ಎರಡನೇ ಬಜೆಟ್‌ ಮಂಡಿಸಲಿದ್ದಾರೆ. ಈ ಮೂಲಕ ಸೀತಾರಾಮನ್‌ ಅವರು ಸತತ 8ನೇ ಬಾರಿ ಬಜೆಟ್‌ ಮಂಡಿಸಿದ ದಾಖಲೆ ನಿರ್ಮಿಸಲಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ ದುರ್ಬಲಗೊಂಡಿರುವ ಆರ್ಥಿಕ ಬೆಳವಣಿಗೆಗೆ ಬಲ ತುಂಬುವ ಹಾಗೂ ಬೆಲೆ ಏರಿಕೆ ಮತ್ತು ಸ್ಥಿರ ಆದಾಯದಂತಹ ಸಮಸ್ಯೆಗಳಿಂದ ಬಳಲುತ್ತಿರುವ ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತಹ ನಿರ್ಧಾರಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.

2019ರಲ್ಲಿ ಮೋದಿ ಸರ್ಕಾರದ 2ನೇ ಅವಧಿಯಲ್ಲಿ ಪೂರ್ಣಾವಧಿ ವಿತ್ತ ಸಚಿವೆಯಾಗಿ ನೇಮಕಗೊಂಡ ನಿರ್ಮಲಾ ಅವರು ಒಟ್ಟು 7 ಪೂರ್ಣಾವಧಿ ಹಾಗೂ 2024ರ ಫೆಬ್ರವರಿಯಲ್ಲಿ 1 ಮಧ್ಯಂತರ ಬಜೆಟ್‌ ಮಂಡಿಸಿದ್ದರು. ಇನ್ನು ಕೇವಲ 3 ಬಜೆಟ್‌ ಮಂಡಿಸಿದರೆ ಒಟ್ಟು 11 ಬಜೆಟ್‌ ಮಂಡಿಸಿದ ಸಾರ್ವಕಾಲಿಕ ದಾಖಲೆ ಸೃಷ್ಟಿಸಲಿದ್ದಾರೆ.

ಈವರೆಗೆ ವಿವಿಧ ಸರ್ಕಾರಗಳ ಅವಧಿಯಲ್ಲಿ 10 ಬಾರಿ ಬಜೆಟ್‌ ಮಂಡಿಸಿದ ಖ್ಯಾತಿಗೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಪಾತ್ರರಾಗಿದ್ದಾರೆ. ಉಳಿದಂತೆ ವಿತ್ತಸಚಿವರಾಗಿದ್ದ ಪಿ. ಚಿದಂಬರಂ 9 ಬಾರಿ ಹಾಗೂ ಪ್ರಣಬ್‌ ಮುಖರ್ಜಿ 8 ಬಾರಿ ಬಜೆಟ್‌ ಮಂಡಿಸಿದ್ದಾರೆ.

- ಮೋದಿ 3.0 ಸರ್ಕಾರದ 2ನೇ ಮುಂಗಡಪತ್ರ- ಬಜೆಟಲ್ಲಿ ಏನಿರಲಿದೆ ಎಂಬ ಬಗ್ಗೆ ಕುತೂಹಲ

ಷೇರುಪೇಟೆಯೂ ನಾಳೆ ಓಪನ್‌

ಫೆ.1ರಂದೇ ಬಜೆಟ್‌ ಮಂಡಿಸುವ ನಿಯಮ ಜಾರಿಗೆ ಬಂದ ನಂತರ ಶನಿವಾರ ಮಂಡನೆಯಾಗುತ್ತಿರುವ 2ನೇ ಬಜೆಟ್‌ ಇದು. ಸಾಮಾನ್ಯವಾಗಿ ಶನಿವಾರದಂದು ರಜೆ ಇರುವ ಷೇರುಪೇಟೆಯೂ ಕಾರ್ಯನಿರ್ವಹಿಸಲಿದೆ. 2020ರಲ್ಲೂ ಇದೇ ರೀತಿ ಆಗಿತ್ತು.

--ನಿರ್ಮಲಾ ದಾಖಲೆಗೆಇನ್ನು ಮೂರೇ ಬಜೆಟ್‌

ವಿವಿಧ ಸರ್ಕಾರಗಳ ಅವಧಿಯಲ್ಲಿ 10 ಬಜೆಟ್‌ ಮಂಡಿಸಿದ ಖ್ಯಾತಿ ಮೊರಾರ್ಜಿ ದೇಸಾಯಿ ಅವರಿಗೆ ಇದೆ. 8 ಬಜೆಟ್‌ ಮಂಡಿಸಿರುವ ನಿರ್ಮಲಾ ಇನ್ನು 3 ಮುಂಗಡಪತ್ರ ಮಂಡನೆ ಮಾಡಿದರೆ, ದೇಶದಲ್ಲೇ ಅತಿ ಹೆಚ್ಚು ಕೇಂದ್ರ ಬಜೆಟ್ ಮಂಡಿಸಿದ ಮಂತ್ರಿ ಎಂಬ ಖ್ಯಾತಿಗೆ ಭಾಜನರಾಗಲಿದ್ದಾರೆ.

ಇಂದಿನಿಂದ ಸಂಸತ್‌ ಬಜೆಟ್‌ ಅಧಿವೇಶನ

ನವದೆಹಲಿ: ನರೇಂದ್ರ ಮೋದಿ 3.0 ಸರ್ಕಾರದ ಎರಡನೇ ಬಜೆಟ್‌ ಅಧಿವೇಶನ ಶುಕ್ರವಾರದಿಂದ ಆರಂಭವಾಗಲಿದೆ. ಬೆಳಿಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಸದನ ಉದ್ದೇಶಿಸಿ ಮಾತನಾಡಲಿದ್ದಾರೆ.