ಸಾರಾಂಶ
2000 ವಿದ್ಯಾರ್ಥಿಗಳಿಗೆ ಜಾಬ್ ಆಫರ್ ನೀಡಿ ಎರಡು ವರ್ಷಗಳಾದರೂ, ಕೆಲಸಕ್ಕೆ ನೇಮಕ ಮಾಡಿಕೊಳ್ಳದೇ ಯುವಸಮುದಾಯದ ಭವಿಷ್ಯವನ್ನು ಅಡಕತ್ತರಿಯಲ್ಲಿ ಸಿಲುಕಿಸಿರುವ ಇನ್ಫೋಸಿಸ್ ಸಂಸ್ಥೆ ಕುರಿತು ತನಿಖೆ ನಡೆಸಬೇಕು ಎಂದು ಐಟಿ ಉದ್ಯೋಗಿಗಳ ಸಂಘ ನೈಟ್ಸ್ ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಿದೆ.
ನವದೆಹಲಿ: ಕ್ಯಾಂಪಸ್ ನೇಮಕಾತಿಯಲ್ಲಿ 2000 ವಿದ್ಯಾರ್ಥಿಗಳಿಗೆ ಜಾಬ್ ಆಫರ್ ನೀಡಿ ಎರಡು ವರ್ಷಗಳಾದರೂ, ಕೆಲಸಕ್ಕೆ ನೇಮಕ ಮಾಡಿಕೊಳ್ಳದೇ ಯುವಸಮುದಾಯದ ಭವಿಷ್ಯವನ್ನು ಅಡಕತ್ತರಿಯಲ್ಲಿ ಸಿಲುಕಿಸಿರುವ ಇನ್ಫೋಸಿಸ್ ಸಂಸ್ಥೆ ಕುರಿತು ತನಿಖೆ ನಡೆಸಬೇಕು ಎಂದು ಐಟಿ ಉದ್ಯೋಗಿಗಳ ಸಂಘ ನೈಟ್ಸ್ ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಿದೆ.
ನೈಟ್ಸ್ ಅಧ್ಯಕ್ಷ ಹರ್ಪ್ರೀತ್ ಸಿಂಗ್ ಸಲೂಜಾ ಹೊರಡಿಸಿರುವ ಪ್ರಕಟಣೆಯಲ್ಲಿ, ‘ಇನ್ಫೋಸಿಸ್ ಸಂಸ್ಥೆಯು ಕ್ಯಾಂಪಸ್ ನೇಮಕಾತಿಗೆ ಬಂದು ವಿದ್ಯಾರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರ ನೀಡಿ ಎರಡು ವರ್ಷಗಳಾದರೂ ನೇಮಕ ಮಾಡಿಕೊಂಡಿಲ್ಲ. ಇಲ್ಲವೇ ನಿಗದಿತ ಸಮಯದಲ್ಲಿ ನೇಮಕ ಮಾಡಿಕೊಳ್ಳುವುದಾಗಿಯೂ ತಿಳಿಸಿಲ್ಲ. ಹಾಗಾಗಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ನಿರ್ಲಕ್ಷ್ಯ ವಹಿಸಿರುವ ಇನ್ಫೋಸಿಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯಾರ್ಥಿಗಳಿಗೆ ಕಾಯುವಿಕೆಯ ಅವಧಿಯದ್ದೂ ವೇತನ ಒದಗಿಸುವಂತೆ ನಿರ್ದೇಶಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಆಗದಿದ್ದರೆ ಬದಲಿ ವ್ಯವಸ್ಥೆ: ಒಂದು ವೇಳೆ ಇನ್ಫೋಸಿಸ್‌ಗೆ ನೇಮಕ ಮಾಡಿಕೊಳ್ಳುವುದು ಕಷ್ಟವಾದಲ್ಲಿ ಕನಿಷ್ಠ ಪಕ್ಷ ತನ್ನ ಸಂಸ್ಥೆಯೊಳಗೆ ಇತರ ಸಮಾನ ಉದ್ಯೋಗವನ್ನಾದರೂ ನೀಡಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಬೇಕು ಎಂದೂ ಸಹ ದೂರಿನಲ್ಲಿ ಉಲ್ಲೇಖಿಸಲಾಗಿದೆ.
)
;Resize=(128,128))
;Resize=(128,128))
;Resize=(128,128))
;Resize=(128,128))