ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಬಿಜೆಪಿಯ ಪ್ರಣಾಳಿಕೆಯ ಗುಚ್ಛ ಸಂಕಲ್ಪ ಪತ್ರವು ಜುಮ್ಲಾ (ಓಳು) ಪತ್ರದಂತಿದ್ದು, ಹಳೆಯ ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಗಳ ಕುರಿತು ಯಾವುದೇ ಉಲ್ಲೇಖ ತೋರಿಸದೇ ಜನರನ್ನು ವಂಚಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿದೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಬಿಜೆಪಿಯ ಪ್ರಣಾಳಿಕೆಯ ಗುಚ್ಛ ಸಂಕಲ್ಪ ಪತ್ರವು ಜುಮ್ಲಾ (ಓಳು) ಪತ್ರದಂತಿದ್ದು, ಹಳೆಯ ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಗಳ ಕುರಿತು ಯಾವುದೇ ಉಲ್ಲೇಖ ತೋರಿಸದೇ ಜನರನ್ನು ವಂಚಿಸಲಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಪ್ರಣಾಳಿಕೆಯನ್ನು ಉತ್ತಮ ವಾಕ್ಚಾತುರ್ಯದ ಕಣ್ಕಟ್ಟು ಎನ್ನಬಹುದು. ಅದರಲ್ಲಿ ದೇಶದ ಜ್ವಲಂತ ಸಮಸ್ಯೆಗಳ ಪರಿಹಾರದ ಕುರಿತು ಉಲ್ಲೇಖವೇ ಇಲ್ಲ. ಕೇವಲ ಮೋದಿ ಗ್ಯಾರಂಟಿ ಹೆಸರಿನಲ್ಲಿ ಜುಮ್ಲಾ ಪತ್ರ ಬಿಡುಗಡೆ ಮಾಡಲಾಗಿದೆ’ ಎಂದು ಆರೋಪಿಸಿ ಪ್ರಧಾನಿ ಮೋದಿಗೆ 14 ಪ್ರಶ್ನೆಗಳನ್ನು ಹಾಕಿದರು.
ಇದೇ ವೇಳೆ ಬಿಜೆಪಿಯ ಪ್ರಣಾಳಿಕೆಯನ್ನು ಕೇವಲ ಎರಡೇ ವಾರದಲ್ಲಿ ಯಾರದೇ ಸಲಹೆ ತೆಗೆದುಕೊಳ್ಳದೆ ತಯಾರಿಸಲಾದ ಕಾರಣ ಇದನ್ನು ಮಾಫಿನಾಮ (ಕ್ಷಮಾಪತ್ರ) ಎಂದು ಕರೆಯಬಹುದು ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಆರೋಪಿಸಿದರ. ದಲಿತರಿಗೆ ಏನೂ ಯೋಜನೆ ಪ್ರಕಟಿಸದ ಪ್ರಧಾನಿ ಮೋದಿ, ಅವರಲ್ಲಿ ಕ್ಷಮೆಯಾಚಿಸಬೇಕು ಎಂದು ವಕ್ತಾರೆ ಸುಪ್ರಿಯಾ ಶ್ರೀನೇತ್ ಆಗ್ರಹಿಸಿದರು.