ನೋಯ್ಡಾ ಪ್ರಾಧಿಕಾರ ಸಿಬ್ಬಂದಿಗೆ 20 ನಿಮಿಷ ನಿಂತು ಕೆಲಸ ಮಾಡುವ ಶಿಕ್ಷೆ!

| Published : Dec 18 2024, 12:48 AM IST

ನೋಯ್ಡಾ ಪ್ರಾಧಿಕಾರ ಸಿಬ್ಬಂದಿಗೆ 20 ನಿಮಿಷ ನಿಂತು ಕೆಲಸ ಮಾಡುವ ಶಿಕ್ಷೆ!
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ನಾಗರಿಕರೊಬ್ಬರ ಅಹವಾಲು ಸ್ವೀಕರಿಸಿದೇ ಒಂದು ಗಂಟೆ ಕಾಯಿಸಿದ್ದಕ್ಕೆ, ನೋಯ್ಡಾ ಪ್ರಾಧಿಕಾರದ ಸಿಇಒ ಅವರು, ತಮ್ಮ ಕಚೇರಿ ಸಿಬ್ಬಂದಿಗೆ 20 ನಿಮಿಷ ನಿಂತು ಕೆಲಸ ಮಾಡುವ ಶಿಕ್ಷೆ ವಿಧಿಸಿದ ಘಟನೆ ನಡೆದಿದೆ,

ನೋಯ್ಡಾ (ಉ.ಪ್ರ.): ಹಿರಿಯ ನಾಗರಿಕರೊಬ್ಬರ ಅಹವಾಲು ಸ್ವೀಕರಿಸಿದೇ ಒಂದು ಗಂಟೆ ಕಾಯಿಸಿದ್ದಕ್ಕೆ, ನೋಯ್ಡಾ ಪ್ರಾಧಿಕಾರದ ಸಿಇಒ ಅವರು, ತಮ್ಮ ಕಚೇರಿ ಸಿಬ್ಬಂದಿಗೆ 20 ನಿಮಿಷ ನಿಂತು ಕೆಲಸ ಮಾಡುವ ಶಿಕ್ಷೆ ವಿಧಿಸಿದ ಘಟನೆ ನಡೆದಿದೆ,

ನೋಯ್ಡಾ ಪ್ರಾಧಿಕಾರದ ಕಾರ್ಯನಿರ್ವಹಣಾಧಿಕಾರಿ ಲೋಕೇಶ್‌ ಎಂ. ಕಚೇರಿಯಲ್ಲಿ ಸಿಸಿಟೀವಿಯನ್ನು ಅಳವಡಿಸಿದ್ದರು. ಸಿಸಿಟೀವಿ ಪರಿಶೀಲನೆ ವೇಳೆ, ಸಿಬ್ಬಂದಿ ಕಚೇರಿಗೆ ಬರುವ ಜನರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸುಮ್ಮನೆ ಕುಳಿತಿದ್ದು ಹಾಗೂ ವೃದ್ಧರೊಬ್ಬರ ಸಮಸ್ಯೆ ಬಗ್ಗೆ ವಿಚಾರಿಸದೇ ಸುಮಾರು 1 ಗಂಟೆ ಕಾಯಿಸಿದ್ದು ಕಂಡುಬಂತು.

ಹೀಗಾಗಿ ಸಿಇಒ ಅವರು, ನಿರ್ಲಕ್ಷ್ಯ ತೋರಿದ್ದಕ್ಕಾಗಿ 20 ನಿಮಿಷ ನಿಂತುಕೊಂಡೇ ಕೆಲಸ ಮಾಡಿ ಎನ್ನುವ ಶಿಕ್ಷೆಯನ್ನು ಸಿಬ್ಬಂದಿಗೆ ನೀಡಿದ್ದಾರೆ. ಸಿಬ್ಬಂದಿ ಕೂಡ ಶಿಕ್ಷೆಯನ್ನು ಪಾಲಿಸಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.