ವಿಶ್ವದ ಬೃಹತ್‌ ಚುನಾವಣೆಗೆ ಚಾಲನೆ: ನಾಮಪತ್ರ ಆರಂಭ

| Published : Mar 21 2024, 01:46 AM IST / Updated: Mar 21 2024, 08:54 AM IST

ವಿಶ್ವದ ಬೃಹತ್‌ ಚುನಾವಣೆಗೆ ಚಾಲನೆ: ನಾಮಪತ್ರ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆಯ ಮೊದಲ ಹಂತದ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಬುಧವಾರ ಅಧಿಸೂಚನೆ ಪ್ರಕಟಿಸಿದೆ. ಇದರೊಂದಿಗೆ ವಿಶ್ವದ ಅತಿದೊಡ್ಡ ಚುನಾವಣೆಗೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ.

ನವದೆಹಲಿ: ಲೋಕಸಭೆಯ ಮೊದಲ ಹಂತದ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಬುಧವಾರ ಅಧಿಸೂಚನೆ ಪ್ರಕಟಿಸಿದೆ. ಇದರೊಂದಿಗೆ ವಿಶ್ವದ ಅತಿದೊಡ್ಡ ಚುನಾವಣೆಗೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ.

ಲೋಕಸಭೆಗೆ ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಈ ಪೈಕಿ ಏ.19ರಂದು ನಡೆವ ಮೊದಲ ಹಂತಕ್ಕೆ ಬುಧವಾರ ಅಧಿಸೂಚನೆ ಹೊರಡಿಸಲಾಗಿದೆ. ಇದರೊಂದಿಗೆ ನಾಮಪತ್ರ ಸಲ್ಲಿಕೆಗೂ ಚಾಲನೆ ಸಿಕ್ಕಿದೆ. 

ಮೊದಲ ಹಂತದಲ್ಲಿ ಉತ್ತರಪ್ರದೇಶ, ಹರ್ಯಾಣ, ಕೇರಳ, ಹಿಮಾಚಲ ಸೇರಿದಂತೆ 21 ರಾಜ್ಯಗಳ 102 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ಮಾ.27ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಮಾ.28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 

ಮಾ.30 ನಾಮಪತ್ರ ಹಿಂಪಡೆಯಲು ಕಡೆಯ ಅವಕಾಶ ಇರಲಿದ್ದು, ಏ.19ರಂದು ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಘೋಷಣೆಯಾಗಲಿದೆ.

ಎಲ್ಲೆಲ್ಲಿ ಚುನಾವಣೆ: ಮೊದಲ ಹಂತದಲ್ಲಿ ಅರುಣಾಚಲಪ್ರದೇಶ (2), ಅಂಡಮಾನ್‌ ಮತ್ತು ನಿಕೋಬಾರ್‌ (1), ಅಸ್ಸಾಂ (5), ಬಿಹಾರ (4), ಛತ್ತೀಸ್‌ಗಢ (1), ಮಧ್ಯಪ್ರದೇಶ (6), ಮಹಾರಾಷ್ಟ್ರ (5), ಮಣಿಪುರ (2), ಮೇಘಾಲಯ (2), ಮಿಜೋರಾಂ (1), ನಾಗಾಲ್ಯಾಂಡ್‌ (1), ರಾಜಸ್ಥಾನ (12), ಸಿಕ್ಕಿಂ (1).

ತಮಿಳುನಾಡು (39), ತ್ರಿಪುರಾ (1), ಉತ್ತರಪ್ರದೇಶ (8), ಉತ್ತರಾಖಂಡ (5), ಪಶ್ಚಿಮ ಬಂಗಾಳ (3), ಜಮ್ಮು ಮತ್ತು ಕಾಶ್ಮೀರ (1), ಲಕ್ಷದ್ವೀಪ (1), ಪುದುಚೇರಿ (1)ನಲ್ಲಿ ಚುನಾವಣೆ ನಡೆಯಲಿದೆ.

ಉಳಿದಂತೆ 2ನೇ ಹಂತ ಏ.26ಕ್ಕೆ, 3ನೇ ಹಂತ ಮೇ 7ಕ್ಕೆ, 4ನೇ ಹಂತ ಮೇ 13, 5ನೇ ಹಂತ ಮೇ 20, 6ನೇ ಹಂತ ಮೇ 25, 7ನೇ ಹಂತ ಜೂನ್‌ 1ರಂದು ನಡೆಯಲಿದೆ.