ಸಾರಾಂಶ
ತಮಿಳುನಾಡಿನಲ್ಲಿ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಪಟ್ಟಂತೆ ವಾಗ್ವಾದಗಳು ಮತ್ತೊಂದು ಹಂತಕ್ಕೆ ತಲುಪಿದ್ದು, ಡಿಎಂಕೆ ಸಚಿವರೊಬ್ಬರು ತೀರಾ ಕೆಳಮಟ್ಟದ ಹೇಳಿಕೆ ನೀಡಿದ್ದಾರೆ.
ಚೆನ್ನೈ: ತಮಿಳುನಾಡಿನಲ್ಲಿ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಪಟ್ಟಂತೆ ವಾಗ್ವಾದಗಳು ಮತ್ತೊಂದು ಹಂತಕ್ಕೆ ತಲುಪಿದ್ದು, ಡಿಎಂಕೆ ಸಚಿವರೊಬ್ಬರು ತೀರಾ ಕೆಳಮಟ್ಟದ ಹೇಳಿಕೆ ನೀಡಿದ್ದಾರೆ. ‘ಉತ್ತರ ಭಾರತದವರು ಮಕ್ಕಳನ್ನು ಹಂದಿಗಳಂತೆ ಹೆರುತ್ತಾರೆ’ ಎಂದು ಹೇಳಿದ್ದಾರೆ.
ಸಭೆಯೊಂದರಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಜನರು ಸುಸಂಸ್ಕೃತರು. ನಾವು ಜನನ ಪ್ರಮಾಣದ ಮೇಲೆ ನಿಗಾ ಇರಿಸಿದ್ದೆವು. ಆದರೆ ಉತ್ತರ ಭಾರತದವರು ಹಂದಿಗಳಂತೆ ಮಕ್ಕಳನ್ನು ಹೆರುತ್ತಿದ್ದಾರೆ ಎಂದು ಹೇಳಿದ್ದಾರೆ. ಇವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ದಕ್ಷಿಣದ ರಾಜ್ಯದವರು 16 ಮಕ್ಕಳನ್ನು ಹೆರಬೇಕು, ಮದುವೆಯಾದ ಕೂಡಲೇ ಮಕ್ಕಳು ಹೆರಬೇಕು ಎಂಬ ಸಿಎಂ ಸ್ಟಾಲಿನ್ ಹೇಳಿಕೆ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಅಭಿಪ್ರಾಯದ ಬೆನ್ನಲ್ಲೇ ಮತ್ತೋರ್ವ ಡಿಎಂಕೆ ನಾಯಕ ಜನಸಂಖ್ಯೆ ಬಗ್ಗೆ ಮಾತನಾಡಿದ್ದಾರೆ.