ಸಾರಾಂಶ
‘ನನ್ನ ಮಕ್ಕಳ ಕೆಚ್ಚೆದೆಯ ಹೋರಾಟಗಳು ಅಸಾಧ್ಯವಾಗಿರುವುದನ್ನು ಸಾಧ್ಯವಾಗಿಸಿದೆ. ಈ ಗೆಲುವು ಹೊಸದರ ಆರಂಭ. ನಾವು ಹೊಸ ದೇಶವನ್ನು ನಿರ್ಮಿಸುತ್ತೇವೆ. ಶಾಂತಿ ಮತ್ತು ಪ್ರೀತಿಯು ಪುನರ್ ನಿರ್ಮಿಸಲಿದೆ’ ಎಂದು ಜೈಲಿನಿಂದ ಬಿಡುಗಡೆಗೊಂಡಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಹೇಳಿದ್ದಾರೆ.
ಢಾಕಾ: ‘ನನ್ನ ಮಕ್ಕಳ ಕೆಚ್ಚೆದೆಯ ಹೋರಾಟಗಳು ಅಸಾಧ್ಯವಾಗಿರುವುದನ್ನು ಸಾಧ್ಯವಾಗಿಸಿದೆ. ಈ ಗೆಲುವು ಹೊಸದರ ಆರಂಭ. ನಾವು ಹೊಸ ದೇಶವನ್ನು ನಿರ್ಮಿಸುತ್ತೇವೆ. ಶಾಂತಿ ಮತ್ತು ಪ್ರೀತಿಯು ಪುನರ್ ನಿರ್ಮಿಸಲಿದೆ’ ಎಂದು ಜೈಲಿನಿಂದ ಬಿಡುಗಡೆಗೊಂಡಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಹೇಳಿದ್ದಾರೆ.
ಜೈಲಿನಿಂದ ಬಿಡುಗಡೆಗೊಂಡ ಬಳಿಕ, ತಮ್ಮ ಬಿಡುಗಡೆಗೆ ಹೋರಾಡಿದ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸಿದ ಬಳಿಕ ಮಾತನಾಡಿದ ಜಿಯಾ,‘ಧೈರ್ಯದಿಂದ ಹೋರಾಡಿನ ನನ್ನ ಮಕ್ಕಳಿಗೆ ಧನ್ಯವಾದ ಹೇಳಲು ಇಷ್ಟ ಪಡುತ್ತೇನೆ. ಸಾವಿನ ವಿರುದ್ಧ ಹೋರಾಡಿ ಅಸಾಧ್ಯವಾಗಿರುವುದನ್ನು ಸಾಧ್ಯವಾಗಿಸಿದೆ’ ಎಂದರು.‘ಯುವಕರು ದೇಶದ ಭವಿಷ್ಯ. ಅವರು ಕನಸುಗಳನ್ನು ಈಡೇರಿಸಿಕೊಳ್ಳಬೇಕಾದರೆ ಪ್ರಜಾಪ್ರಭುತ್ವವನ್ನು ಕಟ್ಟಬೇಕು. ಹಾನಿ, ಕೋಪ, ಸೇಡುಗಳಿಂದಲ್ಲ. ದೇಶವನ್ನು ಮರು ಸ್ಥಾಪಿಸಲು ನಮಗೆ ಶಾಂತಿ, ಪ್ರೀತಿ ಅಗತ್ಯವಿದೆ’ ಎಂದರು.
‘ ಬಾಂಗ್ಲಾದೇಶವನ್ನು ಸೇಡು, ಕೋಪಗಳಲ್ಲ, ಶಾಂತಿ ಮತ್ತು ಪ್ರೀತಿಯು ಪುನರ್ ನಿರ್ಮಿಸಲಿದೆ’ ಎಂದು ಜೈಲಿನಿಂದ ಬಿಡುಗಡೆಗೊಂಡಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ . ‘ನಾನು ಈಗ ಬಿಡುಗಡೆಗೊಂಡಿದ್ದೇನೆ. ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ಕೆಚ್ಚೆದೆಯಿಂದ ಹೋರಾಡಿ ಅಸಾಧ್ಯವಾಗಿರುವುದನ್ನು ಸಾಧ್ಯವಾಗಿಸಿದವರಿಗೆ ಧನ್ಯವಾದಗಳು. ಈ ಗೆಲುವು ಲೂಟಿ, ಭ್ರಷ್ಟಚಾರಗಳಿಂದ ಮುಕ್ತವಾಗಿಸಲು ಹೊಸ ಸಾಧ್ಯತೆಯನ್ನು ತೆರೆಯಲಿದೆ. ನಾವು ಸಮೃದ್ಧ ದೇಶವನ್ನು ಸುಧಾರಿಸಬೇಕಿದೆ’ ಎಂದರು. ಅಲ್ಲದೇ ಇದೇ ಸಂದರ್ಭದಲ್ಲಿ ‘ದೇಶದ ಯುವ ಶಕ್ತಿಯ ಕೈ ಬಲಪಡಿಸಬೇಕು. ಅವರು ಕನಸುಗಳನ್ನು ದೇಶದ ಪ್ರಜಾಪ್ರಭುತ್ವವನ್ನು ನಿರ್ಮಿಸಬೇಕು’ ಎಂದು ಕರೆ ನೀಡಿದರು.