ಸೀಟು ಕೆಳದರ್ಜೆಗೆ ಇಳಿಕೆ: ಏರಿಂಡಿಯಾ ವಿರುದ್ಧ 3 ಬಾರಿ ಗ್ರಾಮಿ ಪ್ರಶಸ್ತಿ ವಿಜೇತ, ಕನ್ನಡಿಗ ರಿಕಿ ಕೇಜ್ ಕಿಡಿ

| Published : Aug 04 2024, 01:20 AM IST / Updated: Aug 04 2024, 04:57 AM IST

ಸಾರಾಂಶ

‘ಏರಿಂಡಿಯಾ ವಿಮಾನವು ಗುರುತರ ಬ್ರಾಂಡ್‌ ಆಗಲು ಯೋಗ್ಯವಲ್ಲ. ಏಕೆಂದರೆ ಹೇಳದೇ ಕೇಳದೇ ನನ್ನ ಬಿಸಿನೆಸ್‌ ಕ್ಲಾಸ್ ಸೀಟನ್ನು ಸೀಟ್‌ ಡೀಗ್ರೇಡ್‌ ಮಾಡಲಾಗಿದೆ’ ಎಂದು 3 ಬಾರಿ ಗ್ರಾಮಿ ಪ್ರಶಸ್ತಿ ವಿಜೇತ, ಕನ್ನಡಿಗ ರಿಕ್ಕಿ ಕೇಜ್‌ ಅಸಮಾಧಾನ ಹೊರಹಾಕಿದ್ದಾರೆ.

ನವದೆಹಲಿ: ‘ಏರಿಂಡಿಯಾ ವಿಮಾನವು ಗುರುತರ ಬ್ರಾಂಡ್‌ ಆಗಲು ಯೋಗ್ಯವಲ್ಲ. ಏಕೆಂದರೆ ಹೇಳದೇ ಕೇಳದೇ ನನ್ನ ಬಿಸಿನೆಸ್‌ ಕ್ಲಾಸ್ ಸೀಟನ್ನು ಸೀಟ್‌ ಡೀಗ್ರೇಡ್‌ ಮಾಡಲಾಗಿದೆ’ ಎಂದು 3 ಬಾರಿ ಗ್ರಾಮಿ ಪ್ರಶಸ್ತಿ ವಿಜೇತ, ಕನ್ನಡಿಗ ರಿಕ್ಕಿ ಕೇಜ್‌ ಅಸಮಾಧಾನ ಹೊರಹಾಕಿದ್ದಾರೆ.

ಶನಿವಾರ ಮುಂಬೈನಿದ ಬೆಂಗಳೂರಿಗೆ ಕೇಜ್‌ ವಿಮಾನ ಟಿಕೆಟ್‌ ಬುಕ್‌ ಮಾಡಿದ್ದರು. ಆಗ ನಡೆದ ಘಟನೆ ಬಗ್ಗೆ ಎಕ್ಸ್‌ನಲ್ಲಿ ಅಸಮಾಧಾನ ತೋಡಿಕೊಂಡಿರುವ ಕೇಜ್‌,‘ ಏರ್‌ ಇಂಡಿಯಾ ಹೇಳದೆ ಕೇಳದೆ, ಬಿಸಿನೆಸ್‌ ಕ್ಲಾಸ್‌ ಟಿಕೆಟ್‌ನಿಂದ ಕೆಳ ಸ್ತರದ ಸೀಟ್‌ ಕೊಟ್ಟಿದೆ. ನನ್ನ ಟಿಕೆಟ್‌ ಹಣವನ್ನೂ ಮರಳಿಸಲಿಲ್ಲ. ಇದನ್ನು ಕೇಳಿದ್ದಕ್ಕೆ ಸಿಬ್ಬಂದಿ ತುಂಬಾ ರೋಷವಾಗಿ ವರ್ತಿಸಿದ್ದಾರೆ. ಈ ಘಟನೆ ವರ್ಷದಲ್ಲಿ ಮೂರನೇಯದ್ದಾಗಿದ್ದು, ಏರ್‌ ಇಂಡಿಯಾ ಬ್ರಾಂಡ್‌ ಆಗಲು ಯೋಗ್ಯವಲ್ಲದ ಸಂಸ್ಥೆ’ ಎಂದು ಕಿಡಿಕಾರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಏರ್‌ ಇಂಡಿಯಾ, ‘ತಾಂತ್ರಿಕ ದೋಷಕ್ಕೊಳಗಾದ ನಿಗದಿತ ವಿಮಾನದ ಬದಲು ‘ಆಲ್ ಎಕಾನಮಿ ಕ್ಲಾಸ್’ ವಿಮಾನ ಹಾರಿಸಲಾಯಿತು. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ’ ಎಂದಿದೆ.