ಸಾರಾಂಶ
ಕಪ್ಪುರಂಧ್ರದ ಹೊಡೆತಕ್ಕೆ ಸಿಕ್ಕಿ ಛಿದ್ರಗೊಂಡು ಅದರ ಸುತ್ತಲೂ ಸುತ್ತಿರುವ ನಕ್ಷತ್ರದ ಅವಶೇಷಗಳಿಂದ ಭಾರೀ ಪ್ರಮಾಣದ ವಿದ್ಯುತ್ ಕಾಂತೀಯ ಅಲೆಗಳು ಹೊರಹೊಮ್ಮಿದ ನಾಟಕೀಯ ದೃಶ್ಯವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಆಸ್ಟ್ರೋಸ್ಯಾಟ್ ಉಪಗ್ರಹ ಸೆರೆಹಿಡಿದಿದೆ.
ಪಿಟಿಐ ಬೆಂಗಳೂರು
ಕಪ್ಪುರಂಧ್ರದ ಹೊಡೆತಕ್ಕೆ ಸಿಕ್ಕಿ ಛಿದ್ರಗೊಂಡು ಅದರ ಸುತ್ತಲೂ ಸುತ್ತಿರುವ ನಕ್ಷತ್ರದ ಅವಶೇಷಗಳಿಂದ ಭಾರೀ ಪ್ರಮಾಣದ ವಿದ್ಯುತ್ ಕಾಂತೀಯ ಅಲೆಗಳು ಹೊರಹೊಮ್ಮಿದ ನಾಟಕೀಯ ದೃಶ್ಯವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಆಸ್ಟ್ರೋಸ್ಯಾಟ್ ಉಪಗ್ರಹ ಸೆರೆಹಿಡಿದಿದೆ.ಕಪ್ಪುರಂಧ್ರದ ಸೆಳೆತಕ್ಕೆ ಸಿಕ್ಕಿ ನಕ್ಷತ್ರ ಸ್ಫೋಟಗೊಂಡ ಬಳಿಕ ವೃತ್ತಕಾರಾರದಲ್ಲಿ ಸುತ್ತುತ್ತಿರುವ ಅವಶೇಷಗಳು ಪ್ರತಿ ಬಾರಿ ಕಪ್ಪುರಂಧ್ರಕ್ಕೆ ಡಿಕ್ಕಿ ಹೊಡೆದಾಗ ಈ ದ್ರವ್ಯರಾಶಿ ಹೊರಹೊಮ್ಮಿದೆ. ಜೊತೆಗೆ ಈ ನಕ್ಷತ್ರಗಳ ಅವಶೇಷಗಳನ್ನೇ ಕಪ್ಪುರಂಧ್ರವು ಮತ್ತೊಂದು ನಕ್ಷತ್ರಕ್ಕೆ ಅಪ್ಪಳಿಸುವಂತೆ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿದೆ ಎಂದು ಇಸ್ರೋ ಹೇಳಿದೆ. ಇಸ್ರೋ ಜೊತೆಗೆ ಅಮೆರಿಕದ ನಾಸಾದ ಉಪಗ್ರಹ ಕೂಡಾ ಇದೇ ದೃಶ್ಯ ಸೆರೆಹಿಡಿದಿದೆ.
ಈ ದೃಶ್ಯವು ಖಗೋಳಶಾಸ್ತ್ರಜ್ಞರಿಗೆ ಕಪ್ಪುರಂಧ್ರ, ನಕ್ಷತ್ರಗಳ ಸ್ಫೋಟದ ಕುರಿತು ಅಮೂಲ್ಯ ಮಾಹಿತಿ ಕಲೆಹಾಕಲು ನೆರವಾಗಿದೆ ಎಂದು ಇಸ್ರೋ ಹೇಳಿದೆ.