ಸಾರಾಂಶ
ಒಡಿಶಾದಲ್ಲಿ ಸರ್ಕಾರಿ ಮಹಿಳಾ ನೌಕರರಿಗೆ ಸಾಮಾನ್ಯ ರಜೆಯಲ್ಲಿ ಹೆಚ್ಚಳ ಮಾಡಲಾಗಿದ್ದು, ವಾರ್ಷಿಕವಾಗಿ 25 ಸಾಮಾನ್ಯ ರಜೆಯನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದೆ. ಇದೇ ಅವಧಿಯಲ್ಲಿ ಪುರುಷರು ಕೇವಲ 15 ಸಾಮಾನ್ಯ ರಜೆಯನ್ನು ತೆಗೆದುಕೊಳ್ಳಬಹುದಾಗಿದೆ.
ಭುವನೇಶ್ವರ: ಒಡಿಶಾ ರಾಜ್ಯ ಸರ್ಕಾರವು ತನ್ನ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ವರ್ಷಕ್ಕೆ 15ರ ಬದಲು 25 ದಿನ ಸಾಮಾನ್ಯ ರಜೆ (ಸಿಎಲ್) ತೆಗೆದುಕೊಳ್ಳಲು ಅನುಮತಿ ನೀಡಿದೆ.
ಮಂಗಳವಾರ ಈ ಕುರಿತು ಅಧಿಕೃತವಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆದೇಶ ಹೊರಡಿಸಿದ್ದು, ಈ ಪೈಕಿ ಹಿಂದೆ ಇದ್ದ 15 ದಿನಕ್ಕೆ ಇನ್ನು 10 ದಿನ ರಜೆಯನ್ನು ರಾಜ್ಯ ಸರ್ಕಾರ ಸೇರಿಸಿದೆ. ಮಹಿಳೆಯರಿಗೆ ಹೆಚ್ಚು ಸಮಸ್ಯೆ ಹಾಗೂ ಜವಾಬ್ದಾರಿ ಇರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ. ಇಡೀ ದೇಶದಲ್ಲಿಯೇ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿ ತಂದ ಮೊದಲ ರಾಜ್ಯ ಒಡಿಶಾ ಆಗಿದೆ.