ಸಾರಾಂಶ
ನವದೆಹಲಿ: ಆ.23ರಂದು ಆಚರಿಸಲಾದ ರಾಷ್ಟ್ರೀಯ ಬಾಹ್ಯಾಕಾಶ ದಿನದ ಹಿನ್ನೆಲೆಯಲ್ಲಿ ಚಂದ್ರನ ಮೇಲೆ ಪ್ರಜ್ಞಾನ್ ರೋವರ್ ಇಳಿದ ಮೊದಲ ಕ್ಷಣಗಳನ್ನು ಒಳಗೊಂಡಂತೆ ಚಂದ್ರಯಾನ-3ರ ಹೊಸ ಫೋಟೋಗಳನ್ನು ಇಸ್ರೋ ಬಿಡುಗಡೆ ಮಾಡಿದೆ.
ಚಿತ್ರಗಳು ಚಂದ್ರನ ದಕ್ಷಿಣ ಧ್ರುವದ ಬಳಿ ಅಂತಿಮ ಇಳಿಯುವಿಕೆ ಮತ್ತು ಮೃದುವಾದ ಇಳಿಯುವಿಕೆ ಸೇರಿದಂತೆ ವಿವಿಧ ಕಾರ್ಯಾಚರಣೆಯ ಹಂತಗಳ ದೃಶ್ಯಗಳನ್ನು ಒಳಗೊಂಡಿವೆ. ಪ್ರಜ್ಞಾನ್ ರೋವರ್ ಇಳಿಯುವ ಕೆಲ ಕ್ಷಣಗಳ ಮುಂಚಿನ ದೃಶ್ಯಗಳು ಕೂಡ ರೋಚಕವಾಗಿವೆ. ಇದು ಭಾರತದ ಐತಿಹಾಸಿಕ ಚಂದ್ರನ ದಂಡಯಾತ್ರೆಯನ್ನು ಎತ್ತಿತೋರಿಸುತ್ತದೆ.
ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಯಾದ ಚಂದ್ರಯಾನ-3ರ ಅಂಗವಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಪ್ರಜ್ಞಾನ್ ರೋವರ್ 2023ರ ಆ.23ರಂದು ಇಳಿದಿತ್ತು. ಚಂದ್ರನ ಮೇಲೆ ಮೃದುವಾದ ಲ್ಯಾಂಡಿಂಗ್ ಅನ್ನು ಸಾಧಿಸಿದ 4ನೇ ದೇಶ ಮತ್ತು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿತ್ತು. ಹೀಗಾಗಿ ಆ.23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಆಚರಿಸಲಾಗುತ್ತದೆ.