ಗುಜರಾತ್‌ ವಿಮಾನ ದುರಂತದಲ್ಲಿ ಮಡಿದ ಪ್ರತಿಯೊಬ್ಬರದ್ದೂ ಒಂದೊಂದು ದುರಂತ ಕಥೆ. ವಾರದ ಹಿಂದಷ್ಟೇ ಲಂಡನ್‌ನಲ್ಲಿ ಸಾವನ್ನಪ್ಪಿದ್ದ ಪತ್ನಿ ಚಿತಾಭಸ್ಮ ವಿಸರ್ಜನೆಗೆ ಭಾರತಕ್ಕೆ ಬಂದಿದ್ದ ಅರ್ಜುನ್ ಭಾಯ್ ಹಿಂದಿರುಗುವ ವೇಳೆ ಅವಘಢದಲ್ಲಿ ಬಲಿಯಾಗಿದ್ದಾರೆ.  

ಅಹಮದಾಬಾದ್‌: ಗುಜರಾತ್‌ ವಿಮಾನ ದುರಂತದಲ್ಲಿ ಮಡಿದ ಪ್ರತಿಯೊಬ್ಬರದ್ದೂ ಒಂದೊಂದು ದುರಂತ ಕಥೆ. ವಾರದ ಹಿಂದಷ್ಟೇ ಲಂಡನ್‌ನಲ್ಲಿ ಸಾವನ್ನಪ್ಪಿದ್ದ ಪತ್ನಿ ಚಿತಾಭಸ್ಮ ವಿಸರ್ಜನೆಗೆ ಭಾರತಕ್ಕೆ ಬಂದಿದ್ದ ಅರ್ಜುನ್ ಭಾಯ್ ಹಿಂದಿರುಗುವ ವೇಳೆ ಅವಘಢದಲ್ಲಿ ಬಲಿಯಾಗಿದ್ದಾರೆ. ವಾರದ ಅಂತರದಲ್ಲಿ ತಂದೆ- ತಾಯಿ ಇಬ್ಬರನ್ನೂ ಕಳೆದುಕೊಂಡು ಪುಟ್ಟ ಕಂದಮ್ಮಗಳು ಅನಾಥರಾಗಿದ್ದಾರೆ.

ಅಮ್ರೇಲಿ ನಿವಾಸಿ ಅರ್ಜುನ್ ಭಾಯ್‌ ಪತ್ನಿ ಭಾರತಿ ಬೆನ್‌ ಲಂಡನ್‌ನಲ್ಲಿ ನಿಧನರಾಗಿದ್ದರು. ಪತ್ನಿ ಆಸೆಯಂತೆ ಅಸ್ಥಿ ವಿಸರ್ಜನೆಗಾಗಿ ಅರ್ಜುನ್ ಭಾರತಕ್ಕೆ ಬಂದು ಅಮ್ರೇಲಿ ಕೊಳ ಮತ್ತು ನದಿಯಲ್ಲಿ ವಿಸರ್ಜಿಸಿದ್ದರು. ಬಳಿಕ ಅವರು ಲಂಡನ್‌ಗೆ ಹಿಂದಿರುಗಲು ವಿಮಾನವನ್ನೇರಿದ್ದ ಸಂದರ್ಭದಲ್ಲಿ ದುರಂತಕ್ಕೆ ಬಲಿಯಾಗಿದ್ದಾರೆ. ದುಃಖದ ಸಂಗತಿಯೆಂದರೆ ವಿಧಿಯಾಟಕ್ಕೆ ದಂಪತಿಯ 8, 4 ವರ್ಷದ ಇಬ್ಬರು ಹೆಣ್ಣು ಮಕ್ಕಳು ವಾರದಲ್ಲಿ ತಂದೆ ತಾಯಿ ಇಬ್ಬರನ್ನೂ ಕಳೆದುಕೊಳ್ಳುವಂತಾಗಿದೆ