ಸಾರಾಂಶ
ನವದೆಹಲಿ: ಲೋಕಸಭೆಯಲ್ಲಿ ತಾನು ಮಂಡಿಸಿರುವ ಏಕ ದೇಶ ಏಕ ಚುನಾವಣೆ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ)ರಚಿಸಿದೆ. ಜೆಪಿಸಿಗೆ ಲೋಕಸಭೆಯಿಂದ ಪ್ರಿಯಾಂಕಾ ಗಾಂಧಿ, ಅನುರಾಗ್ ಠಾಕೂರ್, ಸಂಬಿತ್ ಪಾತ್ರಾ ಸೇರಿದಂತೆ ಸೇರಿ ಅನೇಕರ ಹೆಸರು ಘೋಷಣೆಯಾಗಿದೆ.
ಈ ಸಮಿತಿಯಲ್ಲಿ ಒಟ್ಟು 31 ಸಂಸದರಿರಲಿದ್ದು, ಈ ಪೈಕಿ ಲೋಕಸಭೆಯಿಂದ 21, ರಾಜ್ಯಸಭೆಯಿಂದ 10 ಸದಸ್ಯರ ಹೆಸರನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಕೇಂದ್ರದ ಜೆಪಿಸಿ ಸಮಿತಿಯಲ್ಲಿ ಸ್ಥಾನ ಪಡೆದಿರುವ ಲೋಕಸಭಾ ಸದಸ್ಯರ ಪಟ್ಟಿಯಲ್ಲಿ ಪಿ.ಪಿ.ಚೌಧರಿ, ಸಿ.ಎಂ.ರಮೇಶ್, ಬಾನ್ಸುರಿ ಸ್ವರಾಜ್, ಪರ್ಶೋತಂಬಾಯಿ ರೂಪಾಲ, ಅನುರಾಗ್ ಸಿಂಗ್ ಠಾಕೂರ್, ವಿಷ್ಣು ದಯಾಳ್ ರಾಮ್, ಬಾರ್ತುಹರಿ ಮಹತಾಬ್, ಸಂಬಿತ್ ಪಾತ್ರಾ, ಅನಿಲ್ ಬಾಲೂನಿ, ವಿಷ್ಣು ದತ್ತ ಶರ್ಮ, ಪ್ರಿಯಾಂಕಾ ಗಾಂಧಿ ವಾದ್ತಾ, ಮನೀಶ್ ತಿವಾರಿ, ಸುಖದೇವ್ ಭಗತ್, ಧರ್ಮೇಂದ್ರ ಯಾದವ್, ಕಲ್ಯಾಣ್ ಬ್ಯಾನರ್ಜಿ, ಟಿ.ಎಂ.ಸೇಲ್ವಗಣಪತಿ, ಜಿ.ಎಂ.ಹರೀಶ್ ಬಾಲಯೋಗಿ, ಸುಪ್ರಿಯಾ ಸುಳೆ, ಶ್ರೀಕಾಂತ್ ಏಕನಾಥ್ ಶಿಂಧೆ, ಚಂದನ್ ಚೌಹ್ಹಾಣ್, ಬಾಲಶೌರ್ಯ ವಲ್ಲಭನೇನಿ