ಶಿವಸೇನೆ ಶಾಸಕ ಗಾಯಕ್ವಾಡ್ ವಿರುದ್ಧ ಬನಿಯನ್, ಟವೆಲ್ ಪ್ರತಿಭಟನೆ!

| Published : Jul 17 2025, 12:30 AM IST

ಸಾರಾಂಶ

ಇತ್ತೀಚೆಗೆ ಹಳಸಿದ ಆಹಾರ ಕೊಟ್ಟ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ವಿರುದ್ಧ ವಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ)ಯ ಶಾಸಕರು ವಿನೂತನವಾಗಿ ಪ್ರತಿಭಟಿಸಿದ್ದಾರೆ.

ಮುಂಬೈ: ಇತ್ತೀಚೆಗೆ ಹಳಸಿದ ಆಹಾರ ಕೊಟ್ಟ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ವಿರುದ್ಧ ವಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ)ಯ ಶಾಸಕರು ವಿನೂತನವಾಗಿ ಪ್ರತಿಭಟಿಸಿದ್ದಾರೆ. ಹಲ್ಲೆ ನಡೆಸುವ ವೇಳೆ ಬನಿಯನ್ ಹಾಗೂ ಟವೆಲ್ ಧರಿಸಿದ್ದ ಗಾಯಕ್ವಾಡ್ ರೀತಿಯಲ್ಲೇ ತಾವೂ ಬನಿಯನ್, ಟವೆಲ್ ಧರಿಸಿ ವಿಧಾನ ಭವನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವ ವೇಳೆ ಗಾಯಕ್ವಾಡ್ ಅವರು ಟವೆಲ್ ಅನ್ನು ಲುಂಗಿ ರೀತಿ ಉಟ್ಟು, ಮೇಲೆ ಬನಿಯನ್ ತೊಟ್ಟಿದ್ದರು. ಅದೇ ಪೋಷಾಕಿನಲ್ಲಿ ಬಂದ ವಿಪಕ್ಷ ಶಾಸಕರು ‘ಗೂಂಡಾ ರಾಜ್’ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.