ಮೋದಿ ರೀತಿ ನಾಯಕ ನಮ್ಮ ದೇಶಕ್ಕೂ ಬೇಕು: ಪಾಕ್‌ ಉದ್ಯಮಿ

| Published : May 16 2024, 12:48 AM IST / Updated: May 16 2024, 06:50 AM IST

ಸಾರಾಂಶ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರೀತಿ ನಾಯಕ ಕೇವಲ ಭಾರತಕ್ಕೆ ಮಾತ್ರವಲ್ಲ ಪಾಕಿಸ್ತಾನಕ್ಕೂ ಬೇಕು. ಆಗ ಪಾಕಿಸ್ತಾನವೂ ಪುಟಿದೇಳಲಿದೆ ಎಂದು ಪಾಕಿಸ್ತಾನದ ಅಮೆರಿಕ ಉದ್ಯಮಿ ಸಾಜಿದ್‌ ತರಾರ್‌ ಹಾಡಿ ಹೊಗಳಿದ್ದಾರೆ.

ವಾಷಿಂಗ್ಟನ್‌: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರೀತಿ ನಾಯಕ ಕೇವಲ ಭಾರತಕ್ಕೆ ಮಾತ್ರವಲ್ಲ ಪಾಕಿಸ್ತಾನಕ್ಕೂ ಬೇಕು. ಆಗ ಪಾಕಿಸ್ತಾನವೂ ಪುಟಿದೇಳಲಿದೆ ಎಂದು ಪಾಕಿಸ್ತಾನದ ಅಮೆರಿಕ ಉದ್ಯಮಿ ಸಾಜಿದ್‌ ತರಾರ್‌ ಹಾಡಿ ಹೊಗಳಿದ್ದಾರೆ.

ಅಮೆರಿಕದ ಬಾಲ್ಟಿಮೋರ್‌ನಲ್ಲಿ ಮಾತನಾಡಿದ ಅವರು,‘ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕ್ಷುಬ್ದ ವಾತಾವರಣದಲ್ಲಿಯೂ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಇವರು ಭಾರತದಲ್ಲಿ ತಂದಿರುವ ಆರ್ಥಿಕ ಕ್ರಾಂತಿಕಾರಕ ಬದಲಾವಣೆಗಳು ಇಡೀ ವಿಶ್ವಕ್ಕೆ ಪೂರಕ. ಮೋದಿ ರೀತಿ ನಾಯಕ ಪಾಕಿಸ್ತಾನಕ್ಕೆ ಅತ್ಯಗತ್ಯವಾಗಿದೆ ಎಂದು ಗುಣಗಾನ ಮಾಡಿದರು.

ಮೋದಿ ಅವರು ಭಾರತ ಹಾಗೂ ಪಾಕಿಸ್ತಾನದ ನಡುವೆ ಮತ್ತೆ ವ್ಯಾಪಾರ ವಹಿವಾಟಿನ ಮಾತುಕತೆ ಆರಂಭಿಸಬೇಕು. ಶಾಂತಯುತ ಪಾಕಿಸ್ತಾನವೂ ಭಾರತಕ್ಕೂ ಉತ್ತಮ. ಇವರು ಮತ್ತೆ ಆಯ್ಕೆಯಾಗುತ್ತಾರೆ ಎಂದು ಎಲ್ಲೆಡೆ ಹೇಳಲಾಗುತ್ತಿದೆ ಎಂದು ಮೆಚ್ಚುಗೆ ನುಡಿ ವ್ಯಕ್ತಪಡಿಸಿದರು.