ದೇಶ ವಿಭಜನೆಗೆ ಹಿಂದುಮಹಾಸಭಾ ಕಾರಣ,ಜಿನ್ನಾ ಅಲ್ಲ: ಒವೈಸಿ
KannadaprabhaNewsNetwork | Published : Oct 17 2023, 12:45 AM IST
ದೇಶ ವಿಭಜನೆಗೆ ಹಿಂದುಮಹಾಸಭಾ ಕಾರಣ,ಜಿನ್ನಾ ಅಲ್ಲ: ಒವೈಸಿ
ಸಾರಾಂಶ
ಭಾರತ ವಿಭಜನೆ ಎಂದಿಗೂ ಸಂಭವಿಸಬಾರದಿತ್ತು, ಅದೊಂದು ಐತಿಹಾಸಿಕ ತಪ್ಪು ಎಂದು ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಹೈದರಾಬಾದ್: ಭಾರತ ವಿಭಜನೆ ಎಂದಿಗೂ ಸಂಭವಿಸಬಾರದಿತ್ತು, ಅದೊಂದು ಐತಿಹಾಸಿಕ ತಪ್ಪು ಎಂದು ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಒವೈಸಿ ‘ಐತಿಹಾಸಿಕವಾಗಿ ಇದು ಒಂದು ದೇಶ ಮತ್ತು ದುರದೃಷ್ಟವಶಾತ್ ಇದು ವಿಭಜನೆಯಾಯಿತು. ಅದು ಎಂದಿಗೂ ಆಗಬಾರದಿತ್ತು’ ಎಂದಿದ್ದಾರೆ. ಜೊತೆಗೆ ಭಾರತ ಮತ್ತು ಪಾಕಿಸ್ತಾನವನ್ನು ಹಿಂದೂ ಮಹಾಸಭಾದ ಬೇಡಿಕೆ ಮೇರೆಗೆ ರಚಿಸಲಾಗಿದೆಯೇ ಹೊರತು ಮೊಹಮ್ಮದ್ ಅಲಿ ಜಿನ್ನಾ ಅವರಿಂದಲ್ಲ’ ಎಂದಿದ್ದಾರೆ.