ಕದನ ವಿರಾಮಕ್ಕೆ ಟ್ರಂಪ್‌ ಮಧ್ಯಸ್ಥಿಕೆಭಾರತ ಒಪ್ಪಿರಲಿಲ್ಲ: ಪಾಕ್‌ ಸಚಿವ

| Published : Sep 17 2025, 01:10 AM IST

ಕದನ ವಿರಾಮಕ್ಕೆ ಟ್ರಂಪ್‌ ಮಧ್ಯಸ್ಥಿಕೆಭಾರತ ಒಪ್ಪಿರಲಿಲ್ಲ: ಪಾಕ್‌ ಸಚಿವ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ- ಪಾಕ್‌ ಸಮರ ನಿಲ್ಲಿಸಿದ್ದು ನಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ 30ಕ್ಕೂ ಹೆಚ್ಚು ಬಾರಿ ಸುಳ್ಳು ಹೇಳಿದ ಬೆನ್ನಲ್ಲೇ, ‘ಯುದ್ಧ ನಿಲ್ಲಿಸಲು ಭಾರತ ಎಂದಿಗೂ ಮೂರನೇ ವ್ಯಕ್ತಿಯನ್ನು’ ಬಯಸಿರಲಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್‌ ದಾರ್‌ ಬಹಿರಂಗಪಡಿಸಿದ್ದಾರೆ.

- ಮಿಲಿಟರಿ ಮಾತುಕತೆಯಿಂದಲೇ ಯುದ್ಧ ನಿಂತಿದ್ದು: ದಾರ್‌

ಇಸ್ಲಾಮಾಬಾದ್‌: ಭಾರತ- ಪಾಕ್‌ ಸಮರ ನಿಲ್ಲಿಸಿದ್ದು ನಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ 30ಕ್ಕೂ ಹೆಚ್ಚು ಬಾರಿ ಸುಳ್ಳು ಹೇಳಿದ ಬೆನ್ನಲ್ಲೇ, ‘ಯುದ್ಧ ನಿಲ್ಲಿಸಲು ಭಾರತ ಎಂದಿಗೂ ಮೂರನೇ ವ್ಯಕ್ತಿಯನ್ನು’ ಬಯಸಿರಲಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್‌ ದಾರ್‌ ಬಹಿರಂಗಪಡಿಸಿದ್ದಾರೆ.

ಸಂದರ್ಶನದಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿರುವ ದಾರ್‌, ‘ನಮಗೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಬಗ್ಗೆ ಅಭ್ಯಂತರವಿರಲಿಲ್ಲ. ಆದರೆ ಇದು ದ್ವಿಪಕ್ಷೀಯ ವಿಷಯ ಎಂದು ಭಾರತ ಸ್ಪಷ್ಟವಾಗಿ ಹೇಳಿತ್ತು. ಜು.25ರಂದು ವಾಷಿಂಗ್ಟನ್‌ನಲ್ಲಿ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಅವರನ್ನು ಭೇಟಿಯಾದಾಗ ಈ ವಿಚಾರದ ಬಗ್ಗೆ ಕೇಳಿದ್ದೆವು. ಆಗ ಅವರು ಭಾರತ ಇದು ದ್ವಿಪಕ್ಷೀಯ ವಿಷಯ ಎಂದು ಹೇಳುತ್ತದೆ. ಮಧ್ಯಸ್ಥಿಕೆಗೆ ಒಪ್ಪಿರಲಿಲ್ಲ ಎಂದು ಹೇಳಿದ್ದರು’ ಎಂದು ನುಡಿದ್ದಾರೆ.

ಅಲ್ಲದೇ ಯುದ್ಧ ನಿಲ್ಲಿಸಿದ್ದು ನಾನೇ ಎನ್ನುವ ಟ್ರಂಪ್ ಹೇಳಿಕೆ ಟೀಕಿಸಿರುವ ದಾರ್, ‘ಎರಡೂ ದೇಶಗಳ ಮಿಲಿಟರಿ ನಡುವಿನ ಮಾತುಕತೆಯ ಬಳಿಕ ಕದನ ವಿರಾಮಕ್ಕೆ ಬರಲಾಯಿತು’ ಎಂದು ಸ್ಪಷ್ಟಪಡಿಸಿದ್ದಾರೆ.