ಸಾರಾಂಶ
ರಿಯಾಜ್ ಅಹ್ಮದ್, ಶಾಹಿದ್ ಹತ್ಯೆಗೆ ಭಾರತೀಯ ಏಜೆಂಟ್ ಯೋಗೇಶ್ ಕಾರಣ ಎಂದು ಪಾಕಿಸ್ತಾನ ಆರೋಪಿಸಿದೆ.
ಇಸ್ಲಾಮಾಬಾದ್: ಕೆನಡಾದಲ್ಲಿ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಹಿಂದೆ ಭಾರತದ ಏಜೆಂಟರು ಇದ್ದಾರೆ ಎಂಬ ಕೆನಡಾ ಆರೋಪದ ಬೆನ್ನಲೇ, ಕಳೆದ ವರ್ಷ ಪಾಕಿಸ್ತಾನದಲ್ಲಿ ಅನಾಮಿಕ ವ್ಯಕ್ತಿಗಳಿಂದ ಹತರಾದ ಉಗ್ರರ ಸಾವಿಗೆ ಭಾರತೀಯ ಏಜೆಂಟರು ಕಾರಣ ಪಾಕಿಸ್ತಾನ ಆರೋಪ ಮಾಡಿದೆ. ಇದಕ್ಕೆ ಪುರಾವೆ ಇದೆ ಎಂದು ಸಹ ಹೇಳಿಕೊಂಡಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಮೊಹಮ್ಮದ್ ಸೈರಸ್ ಸಜ್ಜದ್ ಖಾಸಿ,‘ಕಳೆದ ವರ್ಷ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಅನಾಮಿಕ ವ್ಯಕ್ತಿಗಳಿಂದ ಹತರಾದ ಇಬ್ಬರು ಉಗ್ರರ ಸಾವಿಗೆ ಭಾರತದ ಏಜೆಂಟ್ ಯೋಗೇಶ್ ಕುಮಾರ್ ಕಾರಣ.
ಸೆಪ್ಟೆಂಬರ್‌ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹತನಾದ ಲಷ್ಕರ್ ಉಗ್ರ ರಿಯಾಜ್ ಅಹ್ಮದ್ ಹಾಗೂ ಅಕ್ಟೋಬರ್‌ನಲ್ಲಿ ಸಿಯಾಲ್‌ಕೋಟ್‌ನಲ್ಲಿ ಹತನಾದ ಜೈಷ್ ಇ ಮೊಹಮ್ಮದ್ ಉಗ್ರ ಶಾಹಿದ್ ಲತೀಫ್ ಸಾವಿಗೆ ಭಾರತದ ಯೋಗೇಶ್ ಕುಮಾರ್ ಕಾರಣ ಎಂದು ಬಲವಾಗಿ ಆರೋಪಿಸಿದ್ದಾರೆ.
ಆದರೆ ಈ ಆರೋಪಗಳನ್ನು ಭಾರತ ಸ್ಪಷ್ಟವಾಗಿ ಅಲ್ಲಗಳೆದಿದೆ.