26 ಭಾರತೀಯರನ್ನು ಬಲಿ ಪಡೆದ ಕಳೆದ ವರ್ಷದ ಪಹಲ್ಗಾಂ ಉಗ್ರದಾಳಿಯ ಹಿಂದೆ ನೆರೆದೇಶ ಪಾಕಿಸ್ತಾನದ ಕೈವಾಡವಿರುವುದನ್ನು ದೃಢಪಡಿಸುವ ಸಾಕ್ಷಿಯೊಂದು ಲಭಿಸಿದೆ. ದಾಳಿಕೋರರು ಬಳಸಿದ್ದ ಮೊಬೈಲ್‌ಅನ್ನು 2021ರಲ್ಲಿ ಪಾಕ್‌ಗೆ ಆಮದು ಮಾಡಿಕೊಳ್ಳಲಾಗಿತ್ತು. ಅದನ್ನೇ ಉಗ್ರರು ಬಳಸಿದ್ದರು ಎಂದು ಗೊತ್ತಾಗಿದೆ.

ನವದೆಹಲಿ: 26 ಭಾರತೀಯರನ್ನು ಬಲಿ ಪಡೆದ ಕಳೆದ ವರ್ಷದ ಪಹಲ್ಗಾಂ ಉಗ್ರದಾಳಿಯ ಹಿಂದೆ ನೆರೆದೇಶ ಪಾಕಿಸ್ತಾನದ ಕೈವಾಡವಿರುವುದನ್ನು ದೃಢಪಡಿಸುವ ಸಾಕ್ಷಿಯೊಂದು ಲಭಿಸಿದೆ. ದಾಳಿಕೋರರು ಬಳಸಿದ್ದ ಮೊಬೈಲ್‌ಅನ್ನು 2021ರಲ್ಲಿ ಪಾಕ್‌ಗೆ ಆಮದು ಮಾಡಿಕೊಳ್ಳಲಾಗಿತ್ತು. ಅದನ್ನೇ ಉಗ್ರರು ಬಳಸಿದ್ದರು ಎಂದು ಗೊತ್ತಾಗಿದೆ.

3 ಉಗ್ರರಿಂದ ವಶಪಡಿಸಿಕೊಳ್ಳಲಾದ ಮೊಬೈಲ್‌ 

ಭದ್ರತಾಪಡೆಗಳು ಕೈಗೊಂಡಿದ್ದ ಆಪರೇಷನ್‌ ಮಹಾದೇವ್‌ಗೆ ಬಲಿಯಾಗಿದ್ದ 3 ಉಗ್ರರಿಂದ ವಶಪಡಿಸಿಕೊಳ್ಳಲಾದ ಮೊಬೈಲ್‌ಗಳಲ್ಲಿ ಒಂದು 2021ರಲ್ಲಿ ಪಾಕಿಸ್ತಾನಕ್ಕೆ ಆಮದಾದ ಕಿತ್ತಳೆ ಬಣ್ಣದ ರೆಡ್‌ಮಿ 9ಟಿ ಮತ್ತು 2023ರಲ್ಲಿ ಆಮದು ಮಾಡಿಕೊಳ್ಳಲಾದ ಕಪ್ಪು ಬಣ್ಣದ ರೆಡ್‌ಮಿ ನೋಟ್‌ 12 ಇತ್ತು. ಇದರಲ್ಲಿ ಒಂದನ್ನು ಕರಾಚಿಯಲ್ಲಿರುವ ಟೆಕ್ ಸಿರಾಟ್ ಪ್ರೈವೇಟ್ ಲಿ. ಎಂಬ ಕಂಪನಿ ತರಿಸಿಕೊಂಡಿತ್ತು ಹಾಗೂ ಫೈಸಲ್‌ ಎಂಬ ಬ್ಯಾಂಕ್‌ ಆರ್ಥಿಕ ನೆರವು ನೀಡಿತ್ತು ಎನ್ನಲಾಗಿದೆ.

ಕಳ್ಳತನವಾಗಿ ಲಷ್ಕರ್‌ ಉಗ್ರರರ ಪಾಲಾಗಿರಬಹುದು ಎಂಬ ಶಂಕೆ

 ಇನ್ನೊಂದನ್ನು ಏರ್‌ ಲಿಂಕ್‌ ಕಮ್ಯುನಿಕೇಷನ್ಸ್‌ ಎಂಬ ಕಂಪನಿ ಆರ್ಡರ್‌ ಮಾಡಿತ್ತು.ಈ ಮೊಬೈಲ್‌ಗಳು ಕಂಪನಿಗಳನ್ನು ತಲುಪುವ ಮೊದಲೇ ಕಳ್ಳತನವಾಗಿ ಲಷ್ಕರ್‌ ಉಗ್ರರರ ಪಾಲಾಗಿರಬಹುದು ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಅತ್ತ ಅಮೆರಿಕದಲ್ಲಿ ನಡೆದ 9/11 ದಾಳಿಯ ಹಿಂದಿದ್ದ ಅಲ್‌-ಖೈದಾ ಉಗ್ರಸಂಘಟನೆಯ ಖಾತೆಯೊಂದು ಪೈಸಲ್‌ ಬ್ಯಾಂಕ್‌ನಲ್ಲಿ ಇದ್ದುದು ಪತ್ತೆಯಾಗಿತ್ತು. ಆದರೆ ಉಗ್ರರೊಂದಿಗಿನ ನಂಟನ್ನು ತಳ್ಳಿಹಾಕಿರುವ ಬ್ಯಾಂಕ್‌, ‘ಸಂಘಟನೆಗಳು ಬ್ಯಾನ್‌ ಆಗುತ್ತಿದ್ದಂತೆ ಅವುಗಳ ಖಾತೆಗಳನ್ನು ಜಪ್ತಿ ಮಾಡಲಾಗಿತ್ತು’ ಎಂದಿದೆ.